ಕಾಡು ಪ್ರಾಣಿಗಳು ಬಾರದಂತೆ ಅರಣ್ಯ ಇಲಾಖೆಯಿಂದ ಟ್ರಂಚ್ ನಿರ್ಮಿಸಿದ್ದಾರೆ. ಈ ಭಾಗದಲ್ಲಿ ಕಚ್ಚಾ ರಸ್ತೆಯನ್ನಾದರೂ ಮಾಡಿಕೊಟ್ಟು, ಟ್ರಂಚ್ ಸಮೀಪ ಬೇಲಿ ಹಾಕಿಕೊಟ್ಟರೆ ಮಕ್ಕಳು ಓಡಾಡಬಹುದು. ಆನೆಗಳ ಹಾವಳಿ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ವಾಚರ್, ಗಾರ್ಡ್ ಮಕ್ಕಳು ಶಾಲೆ ತಲುಪುವವರೆಗೂ ಜತೆಗೆ ಹೋಗಿ ಬರುತ್ತಿದ್ದರು. ಈ ವ್ಯವಸ್ಥೆಯನ್ನಾದರೂ ಮಾಡಿಕೊಡಿ. ಮರಾಠಿ ಕ್ಯಾಂಪಿನ 18 ಮಕ್ಕಳು ಬೈರಾಪುರ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಚೌಡಿಕಟ್ಟೆಯಲ್ಲಿಯೇ ಅಂಗನವಾಡಿ ತೆರೆದರೆ ಪಾಲಕರು ನೆಮ್ಮದಿಯ ನಿಟ್ಟುಸಿರುಬಿಡುತ್ತಾರೆ. ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಸಹಕಾರ ಅತ್ಯಗತ್ಯವಾಗಿದೆ ಎಂದರು.