ದಕ್ಷಿಣ ಕನ್ನಡ ತಂಡದ ದರ್ಶನ ಪಾತ್ರಧಾರಿಗಳಿಂದ ಕಾಲಾವಧಿ ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನೇಮೋತ್ಸವದಲ್ಲಿ ದೇವಸ್ಥಾನ ಸಮಿತಿಯ ಗುರಿಕಾರ ಪದ್ಮಯ್ಯ, ಅರ್ಚಕರಾದ ಸದಾಶಿವ, ಆನಂದ, ಅಧ್ಯಕ್ಷ ಶಿವಪ್ಪ, ಉಪಾಧ್ಯಕ್ಷ ಗಣೇಶ್, ಪ್ರಧಾನ ಕಾರ್ಯದರ್ಶಿ ಸಂಜಯ್, ಸಹ ಕಾರ್ಯದರ್ಶಿ ನಿತೇಶ್, ಕೋಶಾಧಿಕಾರಿ ಹರೀಶ್, ಸಹ ಕೋಶಾಧಿಕಾರಿ ಸಂತೋಷ್ ಮತ್ತಿತರರು ಭಾಗವಹಿಸಿದ್ದರು.