ಏಳು ಜನರ ವಿರುದ್ಧ ಮರ ಕಡಿದ ಕೇಸ್

 ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ನಾಟಾ.
ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ನಾಟಾ.
Published on

ಪ್ರಮುಖ ಮುಖ್ಯಾಂಶಗಳು

  • ಎರಡು ಪ್ರತ್ಯೇಕ ಪ್ರಕರಣ
  • ಆರೋಪಿಗಳು ನಾಪತ್ತೆ
ಬಾಳೆಹೊನ್ನೂರು: ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸಾಗುವಾನಿ ನೆಡುತೋಪುಗಳಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದ ಆರೋಪದ ಮೇಲೆ ಏಳು ಜನರ ವಿರದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದ ಸರ್ವೇ ನಂ.45ರ ನೇಮನಹಳ್ಳಿ ಸಾಗುವಾನಿ ನೆಡುತೋಪಿನ ಕೆಮ್ಮಣ್ಣುಮಟ್ಟು ಎಂಬಲ್ಲಿ ಮೂರು ಸಾಗುವಾನಿ ಮರ, ಒಂದು ಶಿವನೆ ಜಾತಿಯ ಮರವನ್ನು ಕಡಿದು ನಾಟಾ ಮಾಡಿ ಮುಚ್ಚಿಟ್ಟಿರುವ ಕುರಿತು ಬಂದ ಮಾಹಿತಿ ಆಧರಿಸಿ ಉಪ ವಲಯ ಅರಣ್ಯಾಧಿಕಾರಿ ಅಕ್ರಮ ಪತ್ತೆ ಮಾಡಿದ್ದಾರೆ. ಸ್ಥಳದಲ್ಲಿ ನಾಟಾ ಪತ್ತೆಯಾಗಿದೆ. ಹಲಸೂರು ಗ್ರಾಮದ ರವೀಶ, ಜಕ್ಕಣಕ್ಕಿ ಗ್ರಾಮದ ಶ್ರೀಧರ, ದೇವಗೋಡು ಗ್ರಾಮದ ಸತ್ಯನಾರಾಯಣ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸೀಕೆ ವಲಯದ ಮುದುಗುಣಿ ಕಿರು ಅರಣ್ಯ ಪ್ರದೇಶದ ಸರ್ವೇ ನಂ.90ರಲ್ಲಿ 5 ಸಾಗುವಾನಿ ಮರಗಳನ್ನು ಕಡಿದು ಮುಚ್ಚಿಟ್ಟಿದ್ದನ್ನು ಉಪ ವಲಯ ಅರಣ್ಯಾಧಿಕಾರಿ ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲಿ ನಾಟಾ ಹಾಗೂ ಸೈಜ್ ವಶಪಡಿಸಿಕೊಳ್ಳಲಾಗಿದೆ. ಘಟನೆ ಕುರಿತು ಕಿಚ್ಚಬ್ಬಿ ಎಂ.ಮೋಹನ್, ಸುರೇಶ್, ಹೇರೂರಿನ ಕುಮಾರ್, ದಿವಿನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
 ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ನವೀನ್, ಸದಾಶಿವ, ಚೇತನ್, ನಾಗರಾಜ್, ರಜನೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net