ಒಂದು ಪ್ರದೇಶದ ಕಾಡು, ಭೂಮಿ, ಶುದ್ಧ ಗಾಳಿ, ನೀರು ಹಾಗೂ ಅಲ್ಲಿ ವಾಸಿಸುವ ಜನಸಾಮಾನ್ಯರಿಗೆ ಸೇರಿದೆ. ರೈಲು ಮಾರ್ಗದಂಥ ಬೃಹತ್ ಯೋಜನೆ ವಿಚಾರದಲ್ಲಿ ಸ್ಥಳೀಯ ನೆಲವಾಸಿಗಳನ್ನು ಕತ್ತಲೆಯಲ್ಲಿಟ್ಟು ಯೋಜನೆ ತಯಾರಿಸಿದರೆ ನೆಲವಾಸಿಗಳ ಆಕ್ರೋಶಕ್ಕೆ ಕಾರಣವಾಗಬಹುದು. ಸರ್ಕಾರ, ಇಲಾಖೆ, ಸಚಿವರು, ಜನಪ್ರತಿನಿಧಿಗಳು ರೈಲು ಮಾರ್ಗ ಯೋಜನೆ ಕುರಿತು ಸ್ಥಳೀಯರ ಗಮನಕ್ಕೆ ತಂದಿಲ್ಲ. ರೈಲು ಮಾರ್ಗ ನಿರ್ಮಾಣವಾಗುವ ಮೊದಲು ಸ್ಥಳೀಯರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತು ಮಠದ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ತಂಡದ ಸದಸ್ಯರು ಜಗದ್ಗುರುಗಳ ಗಮನಕ್ಕೆ ತಂದರು.