ಸ್ತನ್ಯಪಾನದಿಂದ ತಾಯಿ-ಮಗುವಿನ ಸಂಬಂಧ ಗಟ್ಟಿ

 ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಸುನೀತಾ ಉದ್ಘಾಟಿಸಿದರು. ಡಾ. ಎಂ.ಜೆ.ಚನ್ನಬಸಪ್ಪ, ಡಾ. ಬಿ.ಜಿ.ಚಂದ್ರಶೇಖರ್, ಪಿ.ಪ್ರವೀಣ್ ಇತರರಿದ್ದರು.
ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಸುನೀತಾ ಉದ್ಘಾಟಿಸಿದರು. ಡಾ. ಎಂ.ಜೆ.ಚನ್ನಬಸಪ್ಪ, ಡಾ. ಬಿ.ಜಿ.ಚಂದ್ರಶೇಖರ್, ಪಿ.ಪ್ರವೀಣ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಸ್ತನ್ಯಪಾನ ಸಪ್ತಾಹ
  • ಶಿಶು ಜನಿಸಿದ ಒಂದು ಗಂಟೆಯೊಳಗೆ
ತರೀಕೆರೆ: ತಾಯಿ ಮಕ್ಕಳಿಗೆ ಹಾಲುಣಿಸುವುದು ಮಮತೆಯ ಪ್ರತೀಕ ಎಂದು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ  ಎಂ.ಜೆ.ಚನ್ನಬಸಪ್ಪ ಹೇಳಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿ, ತಾಯಿಹಾಲು ಜೀವಾಮತವಾಗಿದೆ. ಸ್ತನ್ಯಪಾನದಿಂದ ತಾಯಿ-ಮಗುವಿನ ಸಂಬಂಧ ಗಟ್ಟಿಗೊಳ್ಳಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮಾತನಾಡಿ, ಶಿಶು ಜನಿಸಿದ ಒಂದು ಗಂಟೆಯೊಳಗೆ ತಾಯಿಹಾಲು ಕುಡಿಸಬೇಕು. ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಹಾಲು ಕುಡಿಸಬೇಕು. ನಂತರದ ದಿನಗಳಲ್ಲಿ ಎರಡು ವರ್ಷಗಳವರೆಗೆ ಪೂರಕ ಆಹಾರದೊಂದಿಗೆ ಸ್ತನ್ಯಪಾನ ಮುಂದುವರಿಸಬೇಕು ಎಂದು ಹೇಳಿದರು.
ಸ್ತನ್ಯಪಾನದಿಂದ ಬಾಣಂತಿಯಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗಿ ಗರ್ಭಾಶಯ ಸಹಜ ಸ್ಥಿತಿಗೆ ಮರಳಲು ಸಹಕಾರಿಯಾಗುವುದಲ್ಲದೆ, ಪ್ರಸವೋತ್ತರ ರಕ್ತಸ್ರಾವ ಕಡಿಮೆಯಾಗಿ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯ ತಗ್ಗಿಸುತ್ತದೆ ಎಂದು ಮಾಹಿತಿ ನೀಡಿದರು.
ಮಕ್ಕಳ ತಜ್ಞ ಡಾ. ದೇವಾನಂದ್ ಮಾತನಾಡಿ, ತಾಯಿಹಾಲು ಮಗುವಿಗೆ ಪ್ರಕತಿ ನೀಡಿದ ಮೊದಲ ಲಸಿಕೆ, ಸರ್ವಶ್ರೇಷ್ಠ ಅಮತ.  ಮಗುವಿನ ಜೀವಮಾನದ ಆರೋಗ್ಯದ ಅಡಿಪಾಯ ಎಂದು ಹೇಳಿದರು.
 ರೋಟರಿ ಕ್ಲಬ್ ಕಾರ್ಯದರ್ಶಿ ಪಿ.ಪ್ರವೀಣ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸುನೀತಾ, ವೈದ್ಯರಾದ ನಾಗರಾಜ್, ಶ್ರೀನಿವಾಸ್, ರೋಟರಿ ಕ್ಲಬ್ ಸದಸ್ಯರಾದ ನಿತೀನ್, ಕುಮಾರಪ್ಪ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net