ಬದುಕಿನ ಒತ್ತಡ ನಿವಾರಣೆಗೆ ಪುಸಕ್ತಗಳು ಅಗತ್ಯ

ಕಡೂರಿನ ಮಲ್ಲೇಶ್ವರದ ಪ್ರಾಧ್ಯಾಪಕ ಡಾ.ಆನಂದ್ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯವನ್ನು ಡಾ.ಮಾನಸ ಉದ್ಘಾಟಿಸಿದರು.
ಕಡೂರಿನ ಮಲ್ಲೇಶ್ವರದ ಪ್ರಾಧ್ಯಾಪಕ ಡಾ.ಆನಂದ್ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯವನ್ನು ಡಾ.ಮಾನಸ ಉದ್ಘಾಟಿಸಿದರು.
Published on
ಕಡೂರು: ಭಕ್ತಿಯ ಸಂಕೇತವಾಗಿ ಪೂಜೆ ಮನೆ ನಿರ್ಮಿಸಿದಂತೆ ಜ್ಞಾನ ಸಂಕೇತವಾಗಿ ಮನೆಯಲ್ಲಿಯೇ ಗ್ರಂಥಾಲಯ ಸ್ಥಾಪನೆ ಅಗತ್ಯವಾಗಲಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದರು.
ಮಲ್ಲೇಶ್ವರದಲ್ಲಿ ಪ್ರಾಧ್ಯಾಪಕ ಡಾ.ಆನಂದ್ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಹಯೋಗದಿಂದಿಗೆ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡದ ಬದುಕಿಗೆ ವಿಶ್ರಾಂತಿಯ ತಾಣಕ್ಕೆ ಪುಸ್ತಕ ಅತ್ಯವಶ್ಯಕ. ಆದರೆ ಇಂದಿನ ತಂತ್ರಜ್ಞಾನದ ಹಾವಳಿಯಿಂದ ಹಸ್ತಕದಲ್ಲಿರಬೇಕಾದ ಪುಸ್ತಕದ ಕೈಗಳಿಗೆ ಮೊಬೈಲ್ ಆವರಿಸಿಕೊಂಡಿದೆ. ಅನೇಕ ಸಾಹಿತಿಗಳು, ಲೇಖಕರು ಉತ್ತಮ ಸಂದೇಶ ನೀಡುವ ಮೂಲಕ ರಚಿಸಿದ ಪುಸ್ತಕಗಳು ಕಣ್ಮರೆಯಾಗುತ್ತಿರುವುದನ್ನು ಮನಗಂಡು ನಮ್ಮ ಮಸ್ತಕದ ಜಾಗಕ್ಕೆ ತುಂಬಲು ಪ್ರಾಧಿಕಾರದ ಮೂಲಕ ಮನೆಗೊಂದು ಗ್ರಂಥಾಲಯ ಅನುಷ್ಟಾನಗೊಳಿಸುವ ಕಾರ್ಯ ರೂಪಿಸಲಾಗಿದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವರ ನಿವಾಸದಿಂದಲೇ ಲಕ್ಷ ಯೋಜನೆಯ ಮನೆಗೊಂದು ಗ್ರಂಥಾಲಯ ಸ್ಥಾಪಿಸಲು ಚಾಲನೆ ದೊರೆತಿದೆ. ಸರ್ಕಾರದ 224 ಶಾಸಕರು ಮತ್ತು ವಿಧಾನ ಪರಿಷತ್, ಲೋಕಸಭಾ ಸದಸ್ಯರ ಮನೆಗಳಲ್ಲಿಯೂ ಗ್ರಂಥಾಲಯ ಸ್ಥಾಪಿಸುವ ಗುರಿಹೊಂದಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆಗಳು ವ್ಯಕ್ತವಾಗುತ್ತಿರುವುದು ಹೆಮ್ಮೆಯ ಸಂಗತಿ. ಈಗಾಗಲೇ ಪ್ರಾಧಿಕಾರದಿಂದ ಅಂಗಳದಲ್ಲಿ ತಿಂಗಳ ಪುಸ್ತಕ ಎಂಬ ಕಾರ್ಯಕ್ರಮದೊಂದಿಗೆ ಗ್ರಂಥಾಲಯದ ಘನತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಾಹಿತಿ ಹೊಸೂರು ಪುಟ್ಟರಾಜು ಮಲೆಗಳಲ್ಲಿ ಮದು ಮಗಳು ಪುಸ್ತಕ ಕುರಿತು ಉಪನ್ಯಾಸ ನೀಡಿದರು. ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷೆ ಸಿ.ರುದ್ರಮ್ಮ ಕಲ್ಲೇಶಪ್ಪ, ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಬಸಪ್ಪ, ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಬಾ.ಪು.ರಾಜು, ಚುಟುಕು ಕವಿ ಬಿಳಿಗಿರಿ ವಿಜಯ್, ನಾಗರಾಜ್, ಗಂಗಾಧರ್, ಕುಂಕನಾಡು ಬಸವರಾಜ್, ಸತೀಶ್, ಪಾರ್ವತಮ್ಮ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net