ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಗೇಂದ್ರ ಅವರಿಗೆ ಈಗಾಗಲೇ ಎಸ್‌ಐಟಿ ಕ್ಲೀನ್‌ಚೀಟ್ ನೀಡಿದ್ದು, ನ್ಯಾಯಾಲಯದಿಂದ ಜಾಮೀನು ಕೂಡ ಲಭಿಸಿದೆ. ಆದರೆ ಬಿಜೆಪಿ ದಲಿತರು ಹಾಗೂ ಪರಿಶಿಷ್ಟ ಪಂಗಡಗಳ ವಿರೋಧಿ ನೀತಿ ಅನುಸರಿಸುತ್ತಾ ನಾಗೇಂದ್ರ ಅವರನ್ನು ರಾಜಕೀಯವಾಗಿ ತುಳಿಯಲು ಬಿಜೆಪಿ ಎಲ್ಲ ನಾಯಕರು ಒಳಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.