ವಸತಿ ಶಾಲೆಗಳ ವಿದ್ಯಾರ್ಥಿಗಳ ಮೂಲಸೌಲಭ್ಯಕ್ಕೆ ಬಿಜೆಪಿ ಮನವಿ
ಚಿಕ್ಕಮಗಳೂರು ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯವನ್ನು ಶೀಘ್ರವೇ ಕಲ್ಪಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡರುಗಳು ಗುರುವಾರ ಶಿರಸ್ತೇದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Published on:
Copied
Follow Us
ಚಿಕ್ಕಮಗಳೂರು: ನಗರದ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯವನ್ನು ಶೀಘ್ರವೇ ಕಲ್ಪಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡರುಗಳು ಗುರುವಾರ ಶಿರಸ್ತೇದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ವಸತಿ ಶಾಲೆಯಲ್ಲಿ ಕಳ ಪೆ ಆಹಾರ, ವಾರ್ಡನ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಮಳೆಯಲ್ಲೇ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾಡಳಿತ ಮೌನವಹಿಸುತ್ತಿದೆ ಎಂದು ದೂರಿದರು.
ಕಳೆದ ಅನೇಕ ತಿಂಗಳಿAದ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತೀವ್ರ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ. ಈ ಘಟನೆ ಜರುಗಿ ಮರ‍್ನಾಲ್ಕು ದಿನಗಳು ಕಳೆದರೂ ಕ್ಷೇತ್ರದ ಶಾಸಕರು ದಲಿತ ವಿದ್ಯಾರ್ಥಿಗಳ ಸಮ ಸ್ಯೆ ಎಂಬ ಕಾರಣಕ್ಕೆ ಯಾವುದೇ ರೀತಿಯಲ್ಲಿ ಗಮನಹರಿಸದೇ ದಲಿತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದರು.
ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿಲ್ಲ. ಶಾಲೆಯ ಸಿಬ್ಬಂದಿಗಳು ಆಹಾರ ಪದಾ ರ್ಥಗಳನ್ನು ಮನೆಗೆ ಕೊಂಡೊಯ್ಯುತ್ತಿರುವುದು ವಿದ್ಯಾರ್ಥಿಗಳು ಬಹಿರಂಗಪಡಿಸಿದ್ದಾರೆ. ನೀರಿನ ಟ್ಯಾಂಕ್ ಸ್ವ ಚ್ಚಗೊಳಿಸದೇ ಕಾರಣ ವಿದ್ಯಾರ್ಥಿಗಳು ಶುದ್ದ ಕುಡಿಯುವ ನೀರಿನ ಸಮಸ್ಯೆಯು ಎದುರಾಗಿದೆ ಎಂದರು.
ಬೆಳಗಿನ ಜಾವ ವಿದ್ಯಾರ್ಥಿಗಳಿಗೆ ಬೀಸಿ ನೀರಿಲ್ಲದೇ ತಣ್ಣನೆಯೇ ನೀರಿನಲ್ಲೇ ಸ್ನಾನ ಮಾಡಬೇಕಾಗಿದೆ. ಬಿಸಿನೀರು ಕೇವಲ ಶಾಲೆಯ ಸಿಬ್ಬಂದಿಗಳಿಗೆ ಮಾತ್ರ ಸೀಮಿತಗೊಂಡಿದೆ. ಈ ಬಗ್ಗೆ ಶಾಲಾಡಳಿತಕ್ಕೆ ವಿಚಾರಿ ಸಿದರೆ ಕೆಟ್ಟದಾಗಿ ನಿಂದನೆ, ಶಾಲೆಯಿಂದ ಹೊರಹೋಗಿ ಬಂದಲ್ಲಿ ಮಾದಕ ವಸ್ತು ಸೇವಿಸುತ್ತಿದ್ದಾರೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ವಸತಿ ಶಾಲೆಗೆ ಉನ್ನತ ಅಧಿಕಾರಿಗಳ ತಂಡದಿAದ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಳ ಪೆ ಆಹಾರ ಮತ್ತು ನೀರಿನ ಗುಣಮಟ್ಟದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಶ್ವತ ಮತ್ತು ಜವಾಬ್ದಾರಿಯುತ ವಾರ್ಡನ್ ನೇಮಕ ಎಂದು ಒತ್ತಾಯಿಸಿದರು.
ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಶೀಘ್ರವೇ ವಸತಿ ಶಾಲೆಗೆ ಭೇಟಿ ನೀಡಿ ಸಮಗ್ರ ಪರಿಶೀಲಿಸಿ, ಮಕ್ಕಳ ಕುಂದು ಕೊರತೆ ನೀಗಿಸುವಲ್ಲಿ ನಿರತರಾಗದಿದ್ದಲ್ಲಿ ವಿದ್ಯಾರ್ಥಿಗಳ ಪಾಲಕರೊಂದಿಗೆ ಬಿಜೆಪಿ ಮುಖಂಡರುಗಳು ಜಿಲ್ಲಾ ಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಪುಟ್ಟಸ್ವಾಮಿ, ಜೆ.ಡಿ.ಲೋಕೇಶ್ ಕೊಲ್ಲಾಬೋವಿ, ಹೆಚ್.ಕೆ.ಕೇಶವಮೂರ್ತಿ, ಭೀರಪ್ಪ, ರೇವನಾಥ್, ಜಿ.ಸಿ.ಮಂಜುನಾಥ್, ಜಗದೀಶ್, ಪ್ರದೀಪ್‌ನಾಯ್ಕ್, ಧ ರ್ಮರಾಜ್, ನರಸಿಂಹ ಮೂರ್ತಿ, ಮೋಹನ್‌ಕುಮಾರ್, ಗುರು, ಯೋಗಿಶ್, ಜಯಣ್ಣ ಮತ್ತಿತರಿದ್ದರು,