ಮರದ ರೆಂಬೆ ಬಿದ್ದು ಬೈಕ್‌ ಸವಾರ ಸಾವು

ಮರದ ರೆಂಬೆ ಬಿದ್ದು ಮೃತ ಪಟ್ಟ ಬೈಕ್‌ ಸವಾರ ರಘು
ಮರದ ರೆಂಬೆ ಬಿದ್ದು ಮೃತ ಪಟ್ಟ ಬೈಕ್‌ ಸವಾರ ರಘು
Published on

ಪ್ರಮುಖ ಮುಖ್ಯಾಂಶಗಳು

  • ಬೈಕ್‌ನಲ್ಲಿ ಹೋಗುವಾಗ ಆಕಸ್ಮಿಕವಾಗಿ ತಲೆ ಮೇಲೆ ಬಿದ್ದ ಮರದ ರೆಂಬೆ
  • ಬೈಕ್‌ ಸವಾರ ಸ್ಥಳದಲ್ಲೇ ಸಾವು
ಚಿಕ್ಕಮಗಳೂರು: ಮೋಟಾರ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಮರದ ರೆಂಬೆಯೊಂದು ತಲೆಯ ಮೇಲೆ ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಳಸ ತಾಲೂಕಿನ ಸಂಸೆ ಗ್ರಾಮದ ಬಾಳಗಲ್ ಸಮೀಪ ಶನಿವಾರ ಸಂಜೆ ನಡೆದಿದೆ.
ತಾಲೂಕಿನ ಹೊಸಮಠದ ನಿವಾಸಿ ಕೃಷ್ಣಗೌಡ ಅವರ ಪುತ್ರ ರಘು (೩೮) ಮೃತಪಟ್ಟ ದುರ್ದೈವಿ. ಶನಿವಾರ ಸಂಜೆ ರಘು ಅವರು ತಮ್ಮ ಮೋಟಾರ್ ಬೈಕ್‌ನಲ್ಲಿ ಸಂಸೆ-ಕುದುರೆಮುಖ ಮುಖ್ಯ ರಸ್ತೆಯ ಸಂಸೆ ಗ್ರಾಮದ ಬಾಳಗಲ್ ಸಮೀಪದ ಕಟ್ಟುನೀರು ಹಳ್ಳದ ರಸ್ತೆಯಲ್ಲಿ ಚಲಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮರದ ರೆಂಬೆಯೊಂದು ಅವರ ತಲೆಯ ಮೇಲೆ ಮುರಿದು ಬಿದ್ದಿದೆ. ಪೆಟ್ಟಿನ ತೀವ್ರತೆಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ರಘು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತ ರಘು ಅವರ ಕುಟುಂಬ ಈಗಾಗಲೇ ದೊಡ್ಡದೊಂದು ಕರಳು ಹಿಂಡುವ ನೋವಿನಲ್ಲಿದೆ. ರಘು ಅವರ ತಂದೆ ಕೃಷ್ಣೇಗೌಡ ಅವರು ಕಳೆದೆರಡು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈವರೆಗೂ ಅವರ ಪತ್ತೆಯಾಗಿಲ್ಲ. ತಂದೆಗಾಗಿ ಕಾಯುತ್ತಿದ್ದ ಕುಟುಂಬಕ್ಕೆ ಈಗ ಮಗನ ಸಾವಿನ ಸುದ್ದಿ ಮತ್ತೊಂದು ಆಘಾತವನ್ನು ತಂದೊಡ್ಡಿದೆ. ಈ ಸಂಬಂಧ ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net