ಸುಸಂಸ್ಕೃತರಾಗಲು ಭಜನೆ ಸಹಕಾರಿ (Former MLA Y.S.V. Datta)

ಕಡೂರು ತಾಲೂಕು ಸರಸ್ವತಿಪುರ ಗೇಟ್ ಶನೈಶ್ಚರ ಸಮುದಾಯ ಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮತ್ತು ಭಜನೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ವೈಎಸ್‌ವಿ ದತ್ತ ಉದ್ಘಾಟಿಸಿದರು. ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಜಿಗಣೇಹಳ್ಳಿ ನೀಲಕಂಠಪ್ಪ, ಸದಾನಂದ ಬಂಗೇರಾ ಮತ್ತಿತರರಿದ್ದರು.
ಕಡೂರು ತಾಲೂಕು ಸರಸ್ವತಿಪುರ ಗೇಟ್ ಶನೈಶ್ಚರ ಸಮುದಾಯ ಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮತ್ತು ಭಜನೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ವೈಎಸ್‌ವಿ ದತ್ತ ಉದ್ಘಾಟಿಸಿದರು. ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಜಿಗಣೇಹಳ್ಳಿ ನೀಲಕಂಠಪ್ಪ, ಸದಾನಂದ ಬಂಗೇರಾ ಮತ್ತಿತರರಿದ್ದರು.
Published on
ಕಡೂರು: ಪೂಜೆಗಳು ದೈವತ್ವದ ಜತೆಗೆ ನಂಬಿಕೆ, ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ಕಷ್ಟದ ಸಮಯದಲ್ಲಿ ನಮಗೆ ಸಿಗುವ ಮಾನಸಿಕ ಧೈರ್ಯವೇ ದೈವ ಕೃಪೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಸರಸ್ವತಿಪುರ ಗೇಟ್ ಬಳಿಯ ಶನೈಶ್ಚರ ಸಮುದಾಯ ಭವನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡೂರು ತಾಲೂಕು ಬಿ.ಸಿ.ಟ್ರಸ್ಟ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಏರ್ಪಡಿಸಿದ್ದ ವರಮಹಾಲಕ್ಷ್ಮೀ ಪೂಜೆ ಮತ್ತು ಭಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಂಸ್ಕೃತಿ, ಸಂಪ್ರದಾಯ, ಭಾಷೆ, ಗ್ರಾಮಗಳ ಸೊಗಡು ಉಳಿಸುವ ಜತೆಗೆ ಸುಸಂಸ್ಕೃತರಾಗಲು ಭಜನೆ ಸಹಕಾರಿಯಾಗಿದೆ. ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಲು ಭಜನೆ ಸಹಕಾರಿ. ಮನುಷ್ಯ ಪ್ರಯತ್ನ ಮಾಡಿದ ನಂತರ ದೈವ ಕೃಪೆ ಪಡೆಯಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮಹಿಳೆಯರು ಸಾಮೂಹಿಕವಾಗಿ ಆಚರಿಸುವ ವರಮಹಾಲಕ್ಷ್ಮೀ ಪೂಜೆಯಲ್ಲಿ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಬಾಂಧವ್ಯ ಗಟ್ಟಿಗೊಳಿಸಲಾಗುತ್ತದೆ ಎಂದರು.
ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಯೋಜನೆಯ ಮಾಹಿತಿ ನೀಡಿದರು. ವರಮಹಾಲಕ್ಷ್ಮೀ ಪೂಜಾ ಸಮಿತಿ ಗೌರವಾಧ್ಯಕ್ಷ ಚನ್ನಾಪುರ ಚಂದ್ರಪ್ಪ, ಸಿ.ಎಚ್.ಪ್ರೇಮ್ಕುಮಾರ್, ಸರಸ್ವತಿಪುರ ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ, ಆನಂದ್, ತಾಲೂಕು ಯೋಜನಾಧಿಕಾರಿ ನಾಗವೇಣಿ, ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಲ್.ಗಂಗಾಧರನಾಯ್ಕ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net