ಬಾಳೆಹೊನ್ನೂರಿನಲ್ಲಿ ಉಕ್ಕಿಹರಿದ ಭದ್ರಾ ನದಿ

ಬಾಳೆಹೊನ್ನೂರಿನಲ್ಲಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದು.
ಬಾಳೆಹೊನ್ನೂರಿನಲ್ಲಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮನೆಯಿಂದ ಹೊರಗೆ ಬರಲು
  • ಪ್ರಾಥಮಿಕ ಶಾಲೆಗಳಿಗೆ ರಜೆ
ಬಾಳೆಹೊನ್ನೂರು: ಬಾಳೆಹೊನ್ನೂರು, ಖಾಂಡ್ಯ ಹಾಗೂ ಮೇಗುಂದಾ ಹೋಬಳಿಗಳಲ್ಲಿ ಮಳೆ ಅಬ್ಬರ ಶನಿವಾರವೂ ಮುಂದುವರಿಯಿತು. ನಾಲ್ಕು ದಿನಗಳಿಂದ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು, ಶನಿವಾರ ಇಡೀ ದಿನ ಅಬ್ಬರಿಸಿದ್ದರಿಂದ ಜನರು ಮನೆಯಿಂದ ಹೊರಗೆ ಬರಲು ಯೋಚಿಸುವಂತಾಗಿತ್ತು.
ನಿರಂತರ ಗಾಳಿ, ಮಳೆಯಿಂದ ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮಳೆ ಹೆಚ್ಚಾದ ಕಾರಣ ಹಲವು ಕಡೆಗಳಲ್ಲಿ ಕಾಫಿ ತೋಟಗಳಲ್ಲೂ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. 
ಭದ್ರಾ ನದಿ ಉಗಮ ಸ್ಥಾನ ಗಂಗಾಮೂಲ, ಕುದುರೆಮುಖ, ಕಳಸ, ಬಾಳೆಹೊಳೆ, ಮಾಗುಂಡಿ ಮುಂತಾದ ಕಡೆಗಳಲ್ಲಿ ಸಹ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಬೃಹತ್ ಗಾತ್ರದ ಒಣಗಿದ ಮರಗಳು ತೇಲಿ ಹೋಗುತ್ತಿದ್ದವು.
ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದಂತೆ ಪ್ರವಾಹದ ಆತಂಕ ಎದುರಾಗಿದ್ದು, ನದಿಪಾತ್ರದಲ್ಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಲು ಕಂದಾಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ದಡದಲ್ಲಿರುವ ಕೆಲವು ತೋಟ, ಗದ್ದೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಪ್ರವಾಹದ ನೀರು ನುಗ್ಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net