ಚಿಕ್ಕಮಗಳೂರಿನ ಶ್ರೀಬಸವತತ್ವ ಪೀಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ಧ ೫೯ನೇ ಶಿವಾನುಭವಗೋಷ್ಠಿ ಹಾಗೂ ಶ್ರೀ ಬಸವ ತತ್ವ ಪೀಠದ ಪೀಠಾರೋಹಣದ ೬ನೇ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು.
ಚಿಕ್ಕಮಗಳೂರು: ಬಸವಣ್ಣನವರ ಚಿಂತನೆ, ಆದರ್ಶ, ವಚನಗಳು ಹಾಗೂ ಅನುಭವ ಮಂಟಪದ ಆಲೋಚನೆಗಳು ವಿಶಾಲವಾದ ಆಕಾಶದಂತೆ ಹಬ್ಬಿಕೊಂಡಿದೆ. ಈ ಶ್ರೇಷ್ಟ ವ್ಯಕ್ತಿಯನ್ನು ಯಾರಿಗೂ ಹಳಿಯಲು ಸಾಧ್ಯವಿಲ್ಲ ಎಂದು ಬಸವತತ್ವ ಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಶ್ರೀಬಸವತತ್ವ ಪೀಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ಧ ೫೯ನೇ ಶಿವಾನುಭವಗೋಷ್ಠಿ ಹಾಗೂ ಶ್ರೀ ಬಸವ ತತ್ವ ಪೀಠದ ಪೀಠಾರೋಹಣದ ೬ನೇ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಬಸವಾದಿ ಶರಣರ ವಚನ ಸಾಹಿತ್ಯ, ಆಧ್ಯಾತ್ಮಿಕ ಚಿಂತನೆ, ಹಾಗೂ ನೈತಿಕ ಮೌಲ್ಯಗಳನ್ನು ಜನರಿಗೆ ತಲುಪಿಸಲು ಮಠÀಗಳಲ್ಲಿ ಆಯೋಜಿಸಲಾಗುವ ಧಾರ್ಮಿಕ ಮತ್ತು ಸಾಂಸ್ಕೃತಿಕತೆಯಿದೆ. ಇದರಲ್ಲಿ ಶರಣರ ತತ್ವಗಳ ಕುರಿತು ಉಪನ್ಯಾಸ, ವಚನ ಗಾಯನ ಹಾಗೂ ಸಮಾಜಮುಖಿ ವಿಚಾರಗಳು ಒಳಗೊಂಡಿವೆ ಎಂದರು.
ಮಠಗಳು ದೇವರ ಆರಾಧನೆ ಹೆಸರಿನಲ್ಲಿ ಸದ್ದಿಲ್ಲದೇ ಶೈಕಣಿಕ, ಧಾರ್ಮಿಕ, ಸಾಹಿತ್ಯಾತ್ಮಕ, ಸಾಮಾಜಿಕ, ಸೇರಿದಂತೆ ಮುಂತಾದ ಚಟುವಟಿಕೆಯಲ್ಲಿ ನಿರತವಾಗಿದೆ. ಅಲ್ಲದೇ ವೈಶಿಷ್ಟÈಪೂರ್ಣ ಸಾಮಾಜಿಕ ಚಟುವಟಿಕೆಯಿಂದ ಸುತ್ತಮುತ್ತಲ ಜನಜೀವನದ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಬಸವಣ್ಣನವರ ವಿಚಾರಧಾರೆ, ಬದುಕಿನ ಅನುಭವ ಹಾಗೂ ಸರ್ವ ಜನಾಂಗದ ಒಳಿತಿಗೆ ನೀಡಿರುವ ವಚನಗಳೇ ಜಗತ್ತನ್ನು ಅದ್ಬುತವಾಗಿ ಬೆಳಗಿಸುತ್ತಿವೆ. ಈ ಸಾಲಿನಲ್ಲಿ ನಾವೆಲ್ಲರೂ ಸದೃಢವಾದ ಹೆಜ್ಜೆಯನ್ನಿಟ್ಟು ಬಸವಣ್ಣರ ಆದರ್ಶದಡಿ ಸಾಗಬೇಕಿದೆ ಎಂದು ಹೇಳಿದರು.
ನಾಡೋಜ, ಖ್ಯಾತ ಸಾಹಿತಿ ಡಾ. ಬಿ.ಟಿ.ರುದ್ರೇಶ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮನುಷ್ಯ ದೇಹ ದಂಡನೆಯ ಕೆಲಸಗಳು ಕ್ಷೀಣಿಸುತ್ತಿರುವ ಕಾರಣ ಶರೀರವು ಮಧುಮಹ, ಬಿಪಿ ಹಾಗೂ ಒತ್ತಡಕ್ಕೆ ಸಿಲುಕಿಕೊಂಡಿವೆ. ಶ್ರಮವಿಲ್ಲದೇ ಜೀವನವು ಆರೋಗ್ಯ ನಶಿಸುವ ಜೊತೆಗೆ ಅನಾರೋಗ್ಯಕ್ಕೆ ದಾರಿ ಮಾಡುತ್ತಿದೆ. ಹೀಗಾಗಿ ಮೊದಲು ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅವರ ಪೀಠಾರೋಹಣವಾಗಿ ಆರು ವರ್ಷ ಪೂರೈಸಿದ ಹಿನ್ನೆಲೆ ಸಮಾಜ ಬಾಂಧವರು, ಗಣ್ಯರು ಶ್ರೀಗಳನ್ನು ಗೌರವಿಸುವ ಮೂಲಕ ಅಭಿನಂದಿಸಿದರು. ಬಳಿಕ ಶರಣೆ ಅಕ್ಷತಾ ಹೆಗಡೆ ಅವರಿಂದ ವಚನ ಗಾಯನ ಹಾಗೂ ಕಾಯಕ ಗ್ರೂಪ್‌ನಿಂದ ದಾಸೋಹ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಚನ್ನವೀರೇಶ್ವರ ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳು, ಸಮಾಜ ಮುಖಂಡರು ಉಪಸ್ಥಿತರಿದ್ದರು.