ಸಕಲ ಜೀವಾತ್ಮಗಳಿಗೆ ಒಳಿತು ಬಯಸಿದ ಬಸವಣ್ಣ

ಬುಕ್ಕಾಂಬುದಿಯಲ್ಲಿ ಆಯೋಜಿಸಿದ್ದ ಬಸವೇಶ್ವರರ ಜಯಂತಿ ಹಾಗೂ ಕಾಯಕ ದಿನಾಚರಣೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಬುಕ್ಕಾಂಬುದಿಯಲ್ಲಿ ಆಯೋಜಿಸಿದ್ದ ಬಸವೇಶ್ವರರ ಜಯಂತಿ ಹಾಗೂ ಕಾಯಕ ದಿನಾಚರಣೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
Published on
ತರೀಕೆರೆ: ವಿಶ್ವಗುರು ಬಸವೇಶ್ವರರು ಸಕಲ ಜೀವಾತ್ಮಗಳಿಗೆ ಒಳಿತನ್ನು ಬಯಸಿದ್ದಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು ಹೇಳಿದರು.
ಬುಕ್ಕಾಂಬುದಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಮತ್ತು ಕಾಯಕ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಒಲವಿನ ಸಮಾಜ ಕಟ್ಟಲು ಅವಿರತ ಶ್ರಮಿಸಿದ ವಿಶ್ವಮಾನ್ಯ ವಚನಕಾರರನ್ನು ಜಾತಿ ಸಂಕೋಲೆಯಲ್ಲಿ ಬಂಧಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಆರೋಗ್ಯಕರ ಸಮಾಜಕ್ಕೆ ಇಂತಹ ಪ್ರಕ್ರಿಯೆಯನ್ನು ವಿಲಗೊಳಿಸುವ ಅವಶ್ಯಕತೆ ಇದೆ ಎಂದರು.
ಪ್ರಸ್ತುತ ಎಲ್ಲರೂ, ಎಲ್ಲವೂ ಪ್ರಚಾರ, ವ್ಯಾಪಾರದ ಸರಕಾಗಿದ್ದು, ಮನುಷ್ಯ ಮುಖವಾಡ ಧರಿಸಿ ಬದುಕುವಂತಾಗಿದೆ. ಜಾತೀಯತೆ, ಯುದ್ಧ , ಅಸೂಯೆಯಿಂದ ಬಳಲುತ್ತಿರುವ ಜಗತ್ತಿಗೆ ಆತ್ಮವಿಮರ್ಶೆಯ ಮಾದರಿಯಾಗಿ ಶರಣರ ನಡೆ ಮತ್ತು ನುಡಿಗಳು ಕಾಣುತ್ತವೆ. ಅಂಥ ದಾರ್ಶನಿಕರ ಜಯಂತಿ ಅರ್ಥ ಪೂರ್ಣವಾಗಿ ಆಚರಿಸುವುದೆಂದರೆ ನಮ್ಮಲ್ಲಿನ ಕೊಳಕುಗಳನ್ನು ಕಳೆದುಕೊಳ್ಳುವುದಾಗಿದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ.ರಾಜಪ್ಪ ಮಾತನಾಡಿ, ವಚನ ಸಾಹಿತ್ಯ ಗಡಿಗಳನ್ನು ಮೀರಿದ ವಿಶ್ವ ಸಾಹಿತ್ಯವಾಗಿದೆ. ಅವುಗಳನ್ನು ರಚಿಸಿದ ಶರಣರ ಆದರ್ಶ ಸ್ಮರಿಸಲು, ಈ ಮೂಲಕ ಸಮಾಜವನ್ನು ಎಚ್ಚರಿಸಲು ದಾರ್ಶನಿಕರ ಜಯಂತಿ ಆಚರಣೆ ಅಗತ್ಯವಾಗಿದೆ ಎಂದರು.
ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು, ವೈದ್ಯಾಧಿಕಾರಿ ಡಾ.ಕೆ.ಸದಾಶಿವ, ಪ್ರತಿಭಾನ್ವಿತ ವಿದ್ಯಾರ್ಥಿ ಎಚ್.ಎಂ.ಅಭಿಷೇಕ್‌ಗೆ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿ.ಎನ್.ಶಂಕರಲಿಂಗಪ್ಪ, ಡಾ.ಮಂಜುನಾಥ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net