ಗಾಂಜಾ ಮಾರಾಟಕ್ಕೆ ಯತ್ನಿಸಿದವರ ಬಂಧನ

ಎನ್.ಆರ್.ಪುರ ಪೊಲೀಸರು ವಶಕ್ಕೆ ಪಡೆದ ಗಾಂಜಾ ಹಾಗ ಬೈಕ್‌ಗಳ ಜತೆ ಪೊಲೀಸರು.
ಎನ್.ಆರ್.ಪುರ ಪೊಲೀಸರು ವಶಕ್ಕೆ ಪಡೆದ ಗಾಂಜಾ ಹಾಗ ಬೈಕ್‌ಗಳ ಜತೆ ಪೊಲೀಸರು.
Published on
ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೆ.ಕಣಬೂರು ಬಸ್‌ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ 50 ಸಾವಿರ ರೂ. ಮೌಲ್ಯದ ಗಾಂಜಾ, 2 ಬೈಕ್ ಹಾಗೂ ಮೂವರು ಆರೋಪಿಗಳನ್ನು ಶನಿವಾರ ಸಂಜೆ ಬಂಧಿಸಿದ್ದಾರೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ 4.30ರ ವೇಳೆ ಕೆ.ಕಣಬೂರು ಬಸ್‌ನಿಲ್ದಾಣದಲ್ಲಿ ನಿಂತಿದ್ದ 3 ಆರೋಪಿಗಳನ್ನು ತಪಾಸಣೆ ಮಾಡಿದಾಗ ಅವರ ಬ್ಯಾಗ್‌ನಲ್ಲಿ ಗಾಂಜಾ, ಹೂ, ಮೊಗ್ಗು, ಸೊಪ್ಪು ಪತ್ತೆಯಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳು ಕಡಿಮೆ ದರದಲ್ಲಿ ಗಾಂಜಾ ನೀಡಿದ್ದು ಅದನ್ನು ಇಲ್ಲಿಗೆ ತಂದು ಜಾಸ್ತಿ ದರದಲ್ಲಿ ಮಾರಾಟ ಮಾಡಲು ಎರಡು ಬೈಕ್‌ಗಳಲ್ಲಿ ಇಲ್ಲಿಗೆ ಬಂದು ಮಳೆ ಬಂದಿದ್ದರಿಂದ ಕೆ.ಕಣಬೂರು ಬಸ್ ನಿಲ್ದಾಣದಲ್ಲಿ ನಿಂತಿರುವುದಾಗಿ ಒಪ್ಪಿಕೊಂಡಿದ್ದಾರೆ. ಗಾಂಜಾ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಪಿಎಸ್‌ಐ ಡಿ.ಇ.ನೂತನ್, ಎಎಸ್‌ಐ ನಾಗರಾಜ್, ಸಿಬ್ಬಂದಿ ಮಧು, ಕೌಶಿಕ್, ಚಂದ್ರು, ಪರಮೇಶ್, ಕಾಂತೇಶ್ ಕಾರ್ಯಚರಣೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net