ಬಾಳೆಗದ್ದೆ ಗ್ರಾಮದಲ್ಲಿ ಎಸ್.ಎಂ.ಸೇಹಗಲ್ ಫೌಂಡೇಷನ್‌ನಿಂದ ಆಯೋಜಿಸಿದ್ದ ಮರುತ್ಪಾದಕ ಕಾಫಿ ಕೃಷಿ ಪದ್ಧತಿ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಫಿ ಗಿಡಗಳಿಗೆ ನೀಡುವ ಗೊಬ್ಬರಗಳನ್ನು ಕಂತುಗಳ ಮೂಲಕ ನೀಡಬೇಕು. ಈ ರೀತಿ ಮಾಡುವುದರಿಂದ ಗೊಬ್ಬರದ ಬಳಕೆ ಕಡಿಮೆ ಮಾಡಿ ಇಳುವರಿ ಹೆಚ್ಚು ಪಡೆಯಬಹುದು. ಇದರಿಂದ ಸರಿಯಾದ ಪ್ರಮಾಣದ ಗೊಬ್ಬರ ಗಿಡಕ್ಕೆ ತಲುಪಲು ಸಹಾಯಕವಾಗುತ್ತದೆ.