ಹಿರಿಯ ನಾಗರಿಕರಿಗೆ ಸವಲತ್ತು ಒದಗಿಸಲು ಮನವಿ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಫೆಡರೇಷನ್ ಆಫ್ ಸೀನಿರ‍್ಸ್ ಸಿಟಿಜನ್ ಪೋರಮ್‌ನ ಪದಾಧಿಕಾರಿಗಳು ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಫೆಡರೇಷನ್ ಆಫ್ ಸೀನಿರ‍್ಸ್ ಸಿಟಿಜನ್ ಪೋರಮ್‌ನ ಪದಾಧಿಕಾರಿಗಳು ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
Published on
ಚಿಕ್ಕಮಗಳೂರು: ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮಂಗಳವಾರ ಫೆಡರೇಷನ್ ಆಫ್ ಸೀನಿರ‍್ಸ್ ಸಿಟಿಜನ್ ಪೋರಮ್‌ನ ಪದಾಧಿಕಾರಿಗಳು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಫೆಡರೇಷನ್ ಅಧ್ಯಕ್ಷ ಕೆ.ಎಲ್.ನಂಜುAಡರಾವ್ ಮಾತನಾಡಿ, ಸರ್ಕಾರ ಕಳೆದ ನಾಲ್ಕು ತಿಂಗಳಿAದ ಹಿರಿಯ ನಾಗರಿಕರಿಗೆ ವೃದ್ಧಾಪ್ಯ, ಸಂಧ್ಯಾಸುರಕ್ಷಾ, ವಿಧವಾ, ಅಂಗವಿಕಲ ವೇತನವನ್ನು ನೀಡಿರುವುದಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗಿದೆ ಎಂದು ತಿಳಿಸಿದರು.
ವೃದ್ದಾಪ್ಯದಲ್ಲಿ ಆರೋಗ್ಯದಲ್ಲಿ ಹಿರಿಯರಿಗೆ ಏರುಪೇರಾಗುವುದು ಸಹಜ. ಹೀಗಾಗಿ ಆರೋಗ್ಯ ಚಿಕಿತ್ಸೆ, ಔಷಧಿ, ಮಾತ್ರೆಗಳಿಗೆ ಸರ್ಕಾರದ ವೇತನಕ್ಕೆ ಹಿರಿಯರು ಸೀಮಿತರಾಗಿದ್ದಾರೆ. ಇದೀಗ ಮರ‍್ನಾಲ್ಕು ತಿಂಗಳಿAದ ವೇತನ ವಿತರಿಸದಿರುವ ಕಾರಣ ಅಲೆದಾಡುವಂತಾಗಿದೆ ಎಂದು ಹೇಳಿದರು.
ಕೂಡಲೇ ಜಿಲ್ಲಾಧಿಕಾರಿಗಳು ಹಿರಿಯ ನಾಗರಿಕರಿಗೆ ದೊರಕಬೇಕಾದ ಸೌಲಭ್ಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಫೆಡರೇಷನ್‌ನ ಗೌರವಾಧ್ಯಕ್ಷ ಮುನೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಎಸ್. ರಾಮಚಂದ್ರ, ಉಪಾಧ್ಯಕ್ಷೆ ಸಿ.ಸಂಧ್ಯಾರಾಣಿ, ಎನ್.ಜಿ.ರಾಜಶೇಖರ್, ಎಂ.ಸಿ.ಜೋಯಿ, ಕೆ.ಟಿ.ಪುಟ್ಟಣ್ಣ, ಮು ಖಂಡರುಗಳಾದ ಬಿ.ಎಂ.ಕುಮಾರ್, ಎಲ್.ವಿ.ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net