ಶೆಟ್ಟಿಕೊಪ್ಪದಲ್ಲಿ ರಕ್ತದಾನ ಶಿಬಿರವನ್ನು ಸೇಂಟ್ ಜೋಸೆಫ್ ಚರ್ಚ್ ಫಾದರ್ ಸೆಬಾಸ್ಟಿನ್ ಉದ್ಘಾಟಿಸಿದರು. ಸುನೀಲ್‌ಕುಮಾರ್, ಎನ್.ಎಂ.ಕಾಂತರಾಜ್, ಹನುಮಂತಪ್ಪ, ಆದರ್ಶ ಬಿ. ಗೌಡ, ಬೇಸಿಲ್, ಎ.ಬಿ.ಮಂಜುನಾಥ್ ಇತರರಿದ್ದರು.
ವಿಶ್ವದಲ್ಲಿ ಪ್ರತಿ 30 ಸೆಕೆಂಡಿಗೆ 1 ಬಾಟಲ್ ರಕ್ತದ ಅವಶ್ಯಕತೆ
ಎನ್.ಆರ್.ಪುರ: ರಕ್ತದಾನ ಶ್ರೇಷ್ಠವಾಗಿದ್ದು, ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬೇಕು ಎಂದು ಕಡಹಿನಬೈಲು ಗ್ರಾಪಂ ಮಾಜಿ ಉಪಾಧ್ಯಕ್ಷ ಸುನೀಲ್‌ಕುಮಾರ್ ತಿಳಿಸಿದರು.
ಶೆಟ್ಟಿಕೊಪ್ಪದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಮತ್ತು ಶೆಟ್ಟಿಕೊಪ್ಪ ರಕ್ತದಾನಿಗಳ ಬಳಗದ ಆಶ್ರಯದಲ್ಲಿ ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಶೆಟ್ಟಿಕೊಪ್ಪದಲ್ಲಿ ಹಲವು ವರ್ಷಗಳಿಂದ ರಕ್ತದಾನ ಶಿಬಿರ ನಡೆಯುತ್ತಿದ್ದು ಹೆಚ್ಚು ಜನರು ರಕ್ತ ನೀಡಿದ್ದಾರೆ ಎಂದರು.
ಕಸಾಪ ಪೂರ್ವಾಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ರಕ್ತದಾನದಿಂದ ತುರ್ತು ಸಂದರ್ಭದಲ್ಲಿ ಜೀವ ಉಳಿಯಲಿದೆ ಎಂದರು.
ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಹನುಮಂತಪ್ಪ ಮಾತನಾಡಿ, 10 ವಷರ್ಗಳ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ ಪ್ರತಿ 30 ಸೆಕೆಂಡಿಗೆ 1 ಬಾಟಲ್ ರಕ್ತದ ಅವಶ್ಯಕತೆ ಇದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಪ್ರತಿ ದಿನ 2 ಸಾವಿರ ಹೊರ ರೋಗಿಗಳು ಆರೋಗ್ಯ ತಪಾಸಣೆಗೆ ಬರುತ್ತಿದ್ದು, ಅವರಲ್ಲಿ ಕೆಲವರು ಒಳ ರೋಗಿಗಳಾಗಿ ದಾಖಲಾಗುತ್ತಾರೆ. ಅವರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾದಾಗ ತಿಂಗಳಿಗೆ ಕನಿಷ್ಠ 100 ಬಾಟಲ್ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ಆರೋಗ್ಯವಂತರು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬೇಕು ಎಂದು ಮನವಿ ಮಾಡಿದರು.
ಜ್ವಾಲಾಮಾಲಿನಿ ಜೇಸಿ ಅಧ್ಯಕ್ಷ ಆದರ್ಶ ಬಿ. ಗೌಡ ಮಾತನಾಡಿ, ಈ ವರ್ಷ ಜೇಸಿಯಿಂದ ಎರಡನೇ ಬಾರಿ ರಕ್ತದಾನ ಶಿಬಿರ ನಡೆಸುತ್ತಿದ್ದೇವೆ ಎಂದರು. ಶಿಬಿರದಲ್ಲಿ 31 ಯೂನಿಟ್ ರಕ್ತ ಸಂಗ್ರಹವಾಯಿತು.
ಶೆಟ್ಟಿಕೊಪ್ಪ ಸೇಂಟ್ ಜೋಸೆಫ್ ಚರ್ಚ್ ಫಾದರ್ ಸೆಬಾಸ್ಟಿನ್, ಗ್ರಾಪಂ ಮಾಜಿ ಸದಸ್ಯ ಎ.ಬಿ.ಮಂಜುನಾಥ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬೇಸಿಲ್, ಮುಖಂಡ ಗಾಂಧಿಗ್ರಾಮ ನಾಗರಾಜು, ಜೇಸಿ ಕಾರ್ಯದರ್ಶಿ ರಜಿತ್ ವಗಡೆ, ಜೇಸಿ ಸದಸ್ಯ ಜೋಯಿಬ್ರೋ ಇತರರಿದ್ದರು.