ಇಂಡಿಯಾ ಬುಕ್ ರೆಕಾರ್ಡ್‌ಗೆ ಅಕ್ಸಾ ತಬ್ಸಮ್ (india-book-of-records)

ವಿದ್ಯಾರ್ಥಿನಿ ಅಕ್ಸಾ ತಬ್ಸಮ್
ವಿದ್ಯಾರ್ಥಿನಿ ಅಕ್ಸಾ ತಬ್ಸಮ್
Published on

ಬಾಳೆಹೊನ್ನೂರು: ಇಂಡಿಯಾ ಬುಕ್ ಆ್ ರೆಕಾರ್ಡ್ ಗೌರವಕ್ಕೆ ಪಟ್ಟಣದ ನಿವಾಸಿ, ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅಕ್ಸಾ ತಬ್ಸಮ್ ಪಾತ್ರರಾಗಿದ್ದಾರೆ. ಮೂಡಬಿದರೆಯ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ದ್ವಿತೀಯ ವರ್ಷದ ಬಿಎನ್‌ವೈಎಸ್ ವ್ಯಾಸಂಗ ಮಾಡುತ್ತಿರುವ ಅಕ್ಸಾ ತಬ್ಸಮ್, ಪ್ರತಿ ಪದವೂ ಎ ಅಕ್ಷರದಿಂದಲೇ ಪ್ರಾರಂಭವಾಗುವ 310 ಪದಗಳ ಆನ್ ಅಕಾಡೆಮಿ ಅಸೆಂಡೆಂಟ್ ಎಂಬ ವಿಶಿಷ್ಟ ಇಂಗ್ಲಿಷ್ ಟೌಟೋಗ್ರಾಮ್ ಕವಿತೆ ರಚಿಸಿ ಇಂಡಿಯಾ ಬುಕ್ ಆ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಸಂಪೂರ್ಣ ಅರ್ಥಪೂರ್ಣವಾಗಿ ಹಾಗೂ ವ್ಯಾಕರಣಬದ್ಧವಾಗಿ ಮೂಡಿಬಂದಿರುವ ಈ ಕವಿತೆಯನ್ನು ಅಧಿಕೃತವಾಗಿ ಪರಿಶೀಲಿಸಿದ ಸಂಸ್ಥೆಯು ಅಕ್ಸಾ ತಬ್ಸಮ್ ಅವರಿಗೆ ಐಬಿಆರ್ ಅಚೀವರ್ ಬಿರುದು, ಪ್ರಮಾಣಪತ್ರ ಮತ್ತು ಪದಕ ನೀಡಿ ಗೌರವಿಸಿದೆ. ಇವರು ಬಾಳೆಹೊನ್ನೂರಿನ ಆಟೋ ಚಾಲಕ ಇರ್ಶಾದ್ ಅಹ್ಮದ್ ಖಾನ್ ಹಾಗೂ ತಬ್ಸಮ್ ಉಲ್ಮಾ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net