ಚಿತ್ರದುರ್ಗ, ಹೊಸದುರ್ಗ, ಬೀರೂರು, ತರೀಕೆರೆ, ಶಿವಮೊಗ್ಗ, ಕಡೂರು, ಧರ್ಮಸ್ಥಳ, ಮಂಗಳೂರು, ಸಕಲೇಶಪುರ ಹಾಗೂ ಕುಕ್ಕೆ ಸುಬ್ರಹ್ಮಣ್ಯ, ಬುಕ್ಕಾಂಬುದಿ ಮೂಲಕ ಚನ್ನಗಿರಿ, ದಾವಣಗೆರೆ ಇತರ ಊರುಗಳಿಗೆ ಸುಗಮ ಸಂಚಾರದ ಸಂಪರ್ಕ ಕೊಂಡಿಯಂತಿರುವ ಅಜ್ಜಂಪುರದಲ್ಲಿ ಖಾಸಗಿ ಜತೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆ ಸಲುವಾಗಿ ನವೀಕರಿಸಿರುವ ಬಸ್ ನಿಲ್ದಾಣ ಇದ್ದರೂ ಇಲ್ಲದಂತಾಗಿದೆ. ಹಲವು ಕೊರತೆ ಕಾರಣ ಪ್ರಯಾಣಿಕರಷ್ಟೇ ಅಲ್ಲ, ವಾಹನ ಚಾಲಕರು ಸಹ ತಾಪತ್ರಯ ಅನುಭವಿಸುವಂತಾಗಿದೆ.