ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಿ

ಮರ್ಕಲ್ ಗ್ರಾಪಂ ಸಿಂದೋಡಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿದ್ದರು. ಪದಾಧಿಕಾರಿಗಳಾದ ಸುಧೀರ್, ಜಯಣ್ಣ, ಅವಿನಾಶ್ ಇತರರಿದ್ದರು.
ಮರ್ಕಲ್ ಗ್ರಾಪಂ ಸಿಂದೋಡಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿದ್ದರು. ಪದಾಧಿಕಾರಿಗಳಾದ ಸುಧೀರ್, ಜಯಣ್ಣ, ಅವಿನಾಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಂದೋಡಿಯಲ್ಲಿ ಐಸಿಸಿಆರ್‌ಎಲ್ ಕಾರ್ಯಕ್ರಮ
  • ಕಾಳುಮೆಣಸು ಗಿಡ ವಿತರಿಸಿ
ಶೃಂಗೇರಿ: ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದು. ಮಲೆನಾಡಿನಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆಗಳಿಗೆ ರೋಗಬಾಧೆ ಬಂದಿದ್ದು, ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಐಸಿಸಿಆರ್‌ಎಲ್ ಯೋಜನೆ ಸಹಾಯಕ ಕಾರ್ಯಕ್ರಮ ನಿರ್ವಾಹಕ ಸುಮಂತ್ ಹೇಳಿದರು.
ಮರ್ಕಲ್ ಗ್ರಾಪಂ ಸಿಂದೋಡಿಯಲ್ಲಿ ಐಸಿಸಿಆರ್‌ಎಲ್ ಕಾರ್ಯಕ್ರಮದಡಿ ಎಸ್.ಎಂ.ಸೆಹಗಲ್ ಫೌಂಡೇಶನ್‌ನಿಂದ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಕಾಳುಮೆಣಸು ಗಿಡ ವಿತರಿಸಿ ಮಾತನಾಡಿದರು. 
ಕಾಳುಮೆಣಸು ಈಗ ಉತ್ತಮ ಆರ್ಥಿಕ ಬೆಳೆಯಾಗಿದೆ. ತೋಟದಲ್ಲಿರುವ ಮರಗಳಿಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಪ್ರಮುಖ ಉಪ ಬೆಳೆಯಾಗಿ ಮಾರ್ಪಟ್ಟಿದೆ. ಮಳೆಗಾಲಕ್ಕೂ ಮುನ್ನ ಬೋರ್ಡೋ ಸಿಂಪಡಿಸುವುದು, ಸಕಾಲಕ್ಕೆ ಗೊಬ್ಬರ ನೀಡುವುದರಿಂದ ಬಳ್ಳಿಗಳು ಉತ್ತಮವಾಗಿ ಹಬ್ಬುತ್ತವೆ. ಮಲೆನಾಡಿನಲ್ಲಿ ಅಡಿಕೆಗೆ ಪರ್ಯಾಯವಾಗಿ ಕಾಫಿ ಬೆಳೆಯುತ್ತಿದ್ದು, ಕಾಫಿಯನ್ನು ಉತ್ತಮ ಕೃಷಿ ಪದ್ಧತಿ ಮೂಲಕ ಬೆಳೆಸುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಕಾಫಿಗೆ ನೆರಳು ಅಗತ್ಯವಾಗಿದ್ದು ನೆರಳಿನ ಮರವನ್ನು ಸಕಾಲಕ್ಕೆ ಕಸಿ ಮಾಡಬೇಕು ಎಂದರು.
ಸಿಂದೋಡಿ, ಹಂದಿಗದ್ದೆ, ಕೊಚ್ಚಾರು, ದೋಣೂರು, ಸಂಪಾನೆ, ಹೆಗ್ತೂರು ಮುಂತಾದ ರೈತರು ತರಬೇತಿ ಪಡೆದರು. ಸಂಸ್ಥೆಯ ಪದಾಧಿಕಾರಿಗಳಾದ ಸುಧೀರ್, ಜಯಣ್ಣ, ಅವಿನಾಶ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net