ಸತ್ಯ, ಶುದ್ಧ ಕಾಯಕದಿಂದ ಸಾಧನೆ

ಕಡೂರಿನಲ್ಲಿ ಪ್ರೊ. ಡಾ. ಕೆ.ಎ.ರಾಜಣ್ಣ ಅವರ ಅಭಿನಂದನಾ ಗ್ರಂಥವನ್ನು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಭಂಡಾರಿಶ್ರೀನಿವಾಸ್ ಇತರರಿದ್ದರು.
ಕಡೂರಿನಲ್ಲಿ ಪ್ರೊ. ಡಾ. ಕೆ.ಎ.ರಾಜಣ್ಣ ಅವರ ಅಭಿನಂದನಾ ಗ್ರಂಥವನ್ನು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಭಂಡಾರಿಶ್ರೀನಿವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉನ್ನತ ಶಿಕ್ಷಣದ ಸೇವೆಯಲ್ಲಿ ಸುಧೀರ್ಘ ಸೇವೆ
  • ‘ಕಾಯಕ ರಾಜಣ್ಣ’
ಕಡೂರು: ಸತ್ಯ, ಶುದ್ಧ ಕಾಯಕ ಮಾಡಿದವರು ಸಾಧಕರಾಗಲಿದ್ದು, ವತ್ತಿ ಬದುಕಿಗೆ ಶಿಸ್ತು, ಸಮಯ ಪಾಲನೆ ಬಹುಮುಖ್ಯವಾಗಲಿದೆ ಎಂದು ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
 ಶನಿವಾರ ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜಿನ ಪ್ರೊ. ಕೆ.ಎ.ರಾಜಣ್ಣ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಉನ್ನತ ಶಿಕ್ಷಣದ ಸೇವೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಪ್ರೊ. ರಾಜಣ್ಣ ಜವಾಬ್ದಾರಿಯುತ ಅಧ್ಯಾಪಕನಾಗಿ ಕಾರ್ಯನಿರ್ವಹಿಸಿದ್ದರ ಪರಿಣಾಮ ಜನಮನ್ನಣೆಗಳಿಸಲು ಸಾಧ್ಯವಾಗಿದೆ ಎಂದರು.
ಅವರ ಸೇವೆಯನ್ನು ‘ಕಾಯಕ ರಾಜಣ್ಣ’ ಶೀರ್ಷಿಕೆಯಡಿ ಕೃತಿ ರೂಪದಲ್ಲಿ ಹೊರಬಂದಿದೆ. ಬಡವರ ಮಕ್ಕಳ ಶೈಕ್ಷಣಿಕ ಕಾಳಜಿಗೆ ಒತ್ತು ನೀಡಿದಾಗ ಇಂಥ ಸಾಧನೆಗಳನ್ನು ಮಾಡಲು ಸಾಧ್ಯ ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಡೂರಿನ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜಿನ ಪ್ರಗತಿಗೆ ಒತ್ತು ನೀಡಿದ್ದರು ಎಂದರು.
ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜೀವನದಲ್ಲಿ ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡರೆ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯನಾಗಿ ಹೊರಹೊಮ್ಮುತ್ತಾನೆ. ಈ ಸಾಲಿನಲ್ಲಿ ರಾಜಣ್ಣ ಅವರು ನಿಲ್ಲುತ್ತಾರೆ. ಶೈಕ್ಷಣಿಕ ಬದ್ಧತೆ ಮೂಲಕ ಮಕ್ಕಳ ವ್ಯಾಸಂಗದ ಬದುಕಿಗೆ ಆದರ್ಶ ಪ್ರಾಧ್ಯಾಪಕರಾಗಿದ್ದಾರೆ ಎಂದರು.
ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಶರತ್ ಕಷ್ಣಮೂರ್ತಿ, ಬಸವಲಿಂಗಪ್ಪ, ಡಾ. ಅಪ್ಪಾಜಿಗೌಡ, ಕೆಂಪಸಿದ್ದಯ್ಯ, ರವಿ, ಡಿ.ಉಮೇಶ್, ತೋಟದಮನೆ ಮೋಹನ್‌ಕುಮಾರ್, ಸುಷ್ಮಿತಾ ರಾಜಣ್ಣ, ಸೋಮಶೇಖರ್, ಕಾಲೇಜಿನ ಉಪನ್ಯಾಸಕರು ಹಾಗೂ ವಿವಿಧ ಜಿಲ್ಲೆಗಳ ಪ್ರಾಧ್ಯಾಪಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net