ದೇವಾಲಯಕ್ಕೆ ನಾನು ಹಣ್ಣುಕಾಯಿ ತೆಗೆದುಕೊಂಡು ಹೋಗಿದ್ದಾಗ ಬುಟ್ಟಿಯನ್ನು ಗಮನಿಸಿದ ಕೆಲವರು ನಮಗೂ ಬುಟ್ಟಿ ತಯಾರಿಸಿ ಕೊಡುವಂತೆ ಕೇಳಿಕೊಂಡರು. ಅಂದಿನಿಂದ ಬುಟ್ಟಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ. ವಿವಿಧ ಕಡೆ ನಡೆಯುವ ಕಾರ್ಯಕ್ರಮಗಳಲ್ಲಿ ಮಳಿಗೆ ಹಾಕಿ ಬುಟ್ಟಿ ಮಾರಾಟ ಮಾಡುತ್ತಿದ್ದೇನೆ. ಭಾರಿ ಬೇಡಿಕೆ ಇದೆ. ಬುಟ್ಟಿ ಮಾತ್ರ ಮಾರಾಟಕ್ಕೆ ತೆಗೆದುಕೊಂಡು ಹೋಗುವುದರ ಬದಲು, ಕಾಫಿ ಮತ್ತಿತರ ಸ್ಥಳೀಯ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇದರಿಂದ ಇನ್ನಷ್ಟು ವ್ಯಾಪಾರ ನಡೆಸಲು ಅನುಕೂಲವಾಗಿದೆ. ಈ ಕಾರ್ಯಕ್ಕೆ ಪ್ರೀತಿ ಸ್ತ್ರೀಶಕ್ತಿ ಸಂಘ, ತಾಲೂಕು ಪಂಚಾಯಿತಿ ಮತ್ತು ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಶಾಲಿನಿ ಇವರೆಲ್ಲರ ಬೆಂಬಲ ನೆರವಾಗಿದೆ ಎಂದು ಸಂಧ್ಯಾ ಹೇಳಿದ್ದಾರೆ.