ಮಳೆಗೆ ಮರ ಬಿದ್ದು ರಸ್ತೆ ಬಂದ್

ಬಾಳೆಹೊನ್ನೂರಿನ ಬಾಳೆಬಿಳಲು ಬಳಿ ಮುಖ್ಯರಸ್ತೆಗೆ ಮರ ಬಿದ್ದಿರುವುದು.
ಬಾಳೆಹೊನ್ನೂರಿನ ಬಾಳೆಬಿಳಲು ಬಳಿ ಮುಖ್ಯರಸ್ತೆಗೆ ಮರ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ಕೇಶ್ವರ ಸಮೀಪದ ಬಾಳೆಬಿಳಲು ಬಳಿ
  • ಸ್ಥಳೀಯರು
ಬಾಳೆಹೊನ್ನೂರು: ಬಾಳೆಹೊನ್ನೂರು, ಖಾಂಡ್ಯ ಹಾಗೂ ಮೇಗುಂದಾ ಹೋಬಳಿ ವಿವಿಧೆಡೆಗಳಲ್ಲಿ ಮೂರು ದಿನಗಳಿಂದ ಮಳೆ ಬಿರುಸುಗೊಂಡಿದೆ.
ಶುಕ್ರವಾರ ಮುಂಜಾನೆ ನಿರಂತರ ಗಾಳಿ, ಮಳೆಗೆ ಕರ್ಕೇಶ್ವರ ಸಮೀಪದ ಬಾಳೆಬಿಳಲು ಬಳಿ ಮುಖ್ಯರಸ್ತೆಗೆ ಬೃಹತ್ ಮರ ಬಿದ್ದಿದ್ದು, ಸುಮಾರು 6 ಗಂಟೆಗಳ ಕಾಲ ರಸ್ತೆ ಬಂದ್ ಆಗಿತ್ತು. ಸ್ಥಳೀಯರು ಮರ ಕತ್ತರಿಸಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗಾಳಿಯೂ ಜೋರಾಗಿ ಬೀಸುತ್ತಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಮರಗಳು ಬೀಳುತ್ತಿವೆ. ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಪಟ್ಟಣದಲ್ಲಿ ಭದ್ರಾ ನದಿ, ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಏರಿಕೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net