ಮಕ್ಕಳಲ್ಲಿ ಭಯ ನಿವಾರಿಸಲು ವೇದಿಕೆ ಸ್ಪೂರ್ತಿ

ಚಿಕ್ಕಮಗಳೂರು ಹೌಸಿಂಗ್ ಬೋರ್ಡ್ ಸಮೀಪದ ಬಸವಸ್ಪೂರ್ತಿ ಮನೆಯಂಗಳದಿ ಜ್ಞಾನಸುಧಾ ಫೌಂಡೇಷ ನ್ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ಧ ಮಕ್ಕಳೇ ನಡೆಸಿಕೊಡುವ ಮಲೆನಾಡು ನುಡಿಸಿರಿ ಆರನೇ ತಿಂಗಳ ಕಾರ್ಯಕ್ರಮವನ್ನು ಬಸವತತ್ವಪೀಠದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸಿದರು,
ಚಿಕ್ಕಮಗಳೂರು ಹೌಸಿಂಗ್ ಬೋರ್ಡ್ ಸಮೀಪದ ಬಸವಸ್ಪೂರ್ತಿ ಮನೆಯಂಗಳದಿ ಜ್ಞಾನಸುಧಾ ಫೌಂಡೇಷ ನ್ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ಧ ಮಕ್ಕಳೇ ನಡೆಸಿಕೊಡುವ ಮಲೆನಾಡು ನುಡಿಸಿರಿ ಆರನೇ ತಿಂಗಳ ಕಾರ್ಯಕ್ರಮವನ್ನು ಬಸವತತ್ವಪೀಠದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸಿದರು,
Published on
ಚಿಕ್ಕಮಗಳೂರು: ಮಕ್ಕಳಲ್ಲಿ ಆತ್ಮವಿಶ್ವಾಸ, ವೇದಿಕೆ ಭಯ ನಿವಾರಣೆ ಹಾಗೂ ಮಾತನಾಡುವ ಸಂವಹನ ಕೌಶಲ್ಯ ಬೆಳೆಸಲು ಮಲೆನಾಡು ನುಡಿಸಿರಿ ವೇದಿಕೆ ಅತ್ಯಂತ ಸ್ಪೂರ್ತಿದಾಯಕ ಎಂದು ಬಸ ವತತ್ವ ಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಸಮೀಪದ ಬಸವಸ್ಪೂರ್ತಿ ಮನೆಯಂಗಳದಿ ಜ್ಞಾನಸುಧಾ ಫೌಂಡೇಷ ನ್ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ಧ ಮಕ್ಕಳೇ ನಡೆಸಿಕೊಡುವ ಮಲೆನಾಡು ನುಡಿಸಿರಿ ಆರನೇ ತಿಂಗಳ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.
ಎಳೆವಯಸ್ಸಿನಿಂದಲೇ ಮಕ್ಕಳಿಗೆ ಸಾಂಸ್ಕೃತಿಕ, ಸಾಹಿತ್ಯಾತ್ಮಕ ಹಾಗೂ ನೈತಿಕ ಮೌಲ್ಯ ಮೂಡಿಸುವ ಈ ಕರ‍್ಯಕ್ರಮ ಜನಮಾನಸದಲ್ಲಿ ನೆಲೆಕಂಡಿದೆ. ಅಲ್ಲದೇ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣ, ಸಾಹಿತ್ಯಾಭಿ ರುಚಿಗೆ ಸಾಕ್ಷಿಯಾಗಿದ್ದು ಈ ರೀತಿ ಕಾರ್ಯಕ್ರಮ ಪ್ರತಿ ಬಡಾವಣೆ, ಮನೆಗಳಲ್ಲಿ ನಡೆಸುವಂತಾಗಬೇಕು ಎಂ ದು ಆಶಿಸಿದರು.
ಆಧುನಿಕ ಕಾಲಘಟ್ಟದಲ್ಲಿ ಪ್ರಪಂಚ ವೇಗವಾಗಿ ಮುಂದುವರೆಯುತ್ತಿದೆ. ಈ ನಡುವೆ ಮಕ್ಕಳಿಗೆ ಮಾನ ವೀಯ ಮತ್ತು ನೈತಿಕ ಮೌಲ್ಯ ಬೆಳೆಸುವುದು ಪಾಲಕರ ಕರ್ತವ್ಯ. ಹೀಗಾಗಿ ಮಲೆನಾಡು ನುಡಿಸಿರಿ ವೇದಿಕೆಯ ಂತೆ, ನಾಗರೀಕರು ಕಾಳಜಿ ವಹಿಸಿ ಅಲ್ಲಲ್ಲಿ ಕಿಂಚಿತ್ತು ಸಮಾಜಮುಖಿ ಕಾರ್ಯಕ್ರಮ ಸೃಷ್ಟಿಸಿದ್ದಲ್ಲಿ ಸಭ್ಯ ಸಮಾ ಜ ನಿರ್ಮಾಣವಾಗಿಸಲು ಸಾಧ್ಯವಿದೆ ಎಂದರು.
ನಾಡಿನಲ್ಲಿ ಶರಣ ಪರಂಪರೆಗಳ ಕೊಡುಗೆ ಅಪಾರವಿದೆ. ವಚನ ಸಾಹಿತ್ಯ ಕ್ಷೇತ್ರದಲ್ಲಿ ದಾರ್ಶನಿಕರ ಸಂ ದೇಶವು ಜನಾಂಗದ ಉಳಿವಿಗೆ ದಾರಿಮಾಡಿಕೊಟ್ಟಿದೆ. ಆ ನಿಟ್ಟಿನಲ್ಲಿ ಇಂದಿನ ಜನಸಾಮಾನ್ಯರು ಶರಣರ ಇತಿ ಹಾಸವನ್ನು ಮಕ್ಕಳಿಗೆ ಪರಿಚಯಿಸುವ ಜೊತೆಗೆ ಅವರ ಜೀವನಚರಿತ್ರೆ, ಹಿತನುಡಿ, ಭಾವನಾತ್ಮಕ ಸಂಬAಧಗ ಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಕ್ಯಾನ್ಸರ್ ಶಸ್ತç ಚಿಕಿತ್ಸಾ ತಜ್ಞ ಡಾ|| ಎಸ್.ನವೀನ್ ಮಾತನಾಡಿ ಜಗತ್ತಿನಲ್ಲಿ ಯಾವುದೇ ಬದಲಾವಣೆಗಳು ನಿಧಾನಗತಿಯಲ್ಲಿ ಸಾಗಿದರೆ, ನಿಯಂತ್ರಿಸುವ ಶಕ್ತಿ ಮಾನವನಿಗಿದೆ. ಅದರಂತೆ ಕ್ಯಾನ್ಸರ್‌ನ ಮಾರಕ ರೋಗವ ನ್ನು ಆರಂಭದಲ್ಲೇ ಪತ್ತೆಹಚ್ಚೆ ಚಿಕಿತ್ಸೆ ನೀಡಿದ್ದಲ್ಲಿ ರೋಗಮುಕ್ತ ಶರೀರವು ಹೊಂದಲು ಸಾಧ್ಯ ಎಂದರು.
ಪ್ರಸ್ತುತ ಕಾಲಮಾನದಲ್ಲಿ ಕ್ಯಾನ್ಸರ್ ಮಾರಕ ಕಾಯಿಲೆ ಧೂಮಪಾನ, ಮದ್ಯಪಾನ ಹಾಗೂ ದುಶ್ಚಟಗಳ ಬಳಕೆಯಿಂದ ಸಲೀಸಾಗಿ ಮನುಷ್ಯನನ್ನು ಆವರಿಸುತ್ತಿದೆ. ಇದೀಗ ಮಾನವ ಸೇವಿಸುವ ತರಕಾರಿ, ಧವಸ ಧಾ ನ್ಯಗಳನ್ನು ಹಾಳಾಗದಂತೆ ವ್ಯಾಪಾರಿಗಳು ಕಲುಷಿತ ಕೆಮಿಕಲ್ ಮಿಶ್ರಣಗೊಳಿಸುತ್ತಿರುವ ಪರಿಣಾಮ ವ್ಯತಿರಿಕ್ತ ವಾಗಿ ಮನುಷ್ಯ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಧಮಕ್ಕಳ ಪಾಠಶಾಲೆ ಮುಖ್ಯ ಶಿಕ್ಷಕ ಹೆಚ್.ಎಸ್.ಲಕ್ಷö್ಮಣ ಗೌಡ ಮಕ್ಕಳಲ್ಲಿ ಜ್ಞಾನ ಉಣಬಡಿಸುವ ಅಪರೂಪದ ಕಾರ್ಯಕ್ರಮ ಮಲೆನಾಡು ನುಡಿಸಿರಿ. ಭವಿಷ್ಯದಲ್ಲಿ ಈ ಪುಟಾಣಿ ಮುತ್ತು, ರತ್ನಗಳ ಅವಶ್ಯಕತೆ ಬಹಳಷ್ಟಿದೆ. ಭಾರತೀಯ ಸಂಸ್ಕೃತಿ ಹಾಗೂ ನಾಡಿನ ಹಿರಿಮೆಯನ್ನು ಹೆಚ್ಚಿಸಲು ಈ ವೇದಿಕೆ ಅವಕಾಶ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಪುಟಾಣಿ ಕು.ಬೆನಕ ಶ್ರೇಷ್ಟ ಮಾತನಾಡಿ ೧೨ನೇ ಶತಮಾನದ ವಚನ ಸಾಹಿತ್ಯ ಸಾಮಾಜಿಕ ಕ್ರಾಂತಿಯಲ್ಲ ದೇ ಮಹಿಳೆಯರಿಗೆ ಸ್ವಾತಂತ್ರö್ಯ ಮಾತನಾಡುವ ಅಗಾಧವಾದ ಶಕ್ತಿ ತುಂಬಿದೆ. ಈ ಶಕ್ತಿಯಡಿ ಅಕ್ಕಮಹಾದೇ ವಿ, ಆಯದಕ್ಕಿ ಲಕ್ಕವ್ವ, ಸೂಳೆ ಸಂಕವ್ವ, ನೀಲಾಂಬಿಕೆ, ಶರಣೆ ಸತ್ಯಕ್ಕ ಸೇರಿದಂತೆ ಅನೇಕರು ಬಸವಣ್ಣನವರ ಅನುಭವ ಮಂಟಪದಿAದ ಮುನ್ನೆಲೆಗೆ ಬಂದವರು ಎಂದು ಹೇಳಿದರು.
ಇದೇ ವೇಳೆ ಸ್ವಾಮೀಜಿ ಅವರಿಂದ ಜ್ಞಾನಸುಧಾ ಫೌಂಡೇಷನ್ ಲಾಂಛನ ಬಿಡುಗಡೆ ಮಾಡಲಾಯಿ ತು. ಕು. ಜೆ.ಸನ್ನಿಧಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಚನಗೀತೆ, ಸಮೂಹ ಗೀತೆ, ಏಕಪಾತ್ರಅಬಿ üನಯ, ಭಾವಗೀತೆ, ಮಿಮಿಕ್ರಿ, ಸಂಗೀತ ಕಾರ್ಯಕ್ರಮಗಳು ನಡೆದವು.
ಈ ಸಂಧರ್ಭದಲ್ಲಿ ಗುತ್ತಿಗೆದಾರ ಎನ್.ಆರ್.ಸುರೇಶ್, ಆಶ್ರಯ ಫೌಂಡೇಷನ್ ಸಂಸ್ಥಾಪಕಿ ಡಾ|| ವ ರ್ಷ, ಜ್ಞಾನಸುಧಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎ.ಎನ್.ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಕು.ಜೆ.ಶ್ರೀನಿಧಿ ನಿರೂಪಿಸಿದರು. ಕು.ಪರಿಣಿತ ಪ್ರಾರ್ಥಿಸಿದರು. ಕು.ವೆಂಕಣ್ಣ ಸ್ವಾಗತಿಸಿದರು. ಕು. ಖಾ ಲಿದ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net