ಎನ್.ಆರ್.ಪುರ: ರೋಗಿಗಳಿಗೆ ಮರುಜೀವ ನೀಡುವುದರ ಜತೆ ಅವರ ಬಾಳಿಗೆ ಭರವಸೆಯ ಬೆಳಕಾಗುವವರು ವೈದ್ಯರು ಎಂದು ರೈತ ಮುಖಂಡ ಎಂ.ಎನ್.ನಾಗೇಶ್ ಹೇಳಿದರು.
ವೈದ್ಯರ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಲ್ಲಿ ರೋಟರಿ ಕ್ಲಬ್‌ನಿಂದ ಕೀಲು ಮತ್ತು ಮೂಳೆ ತಜ್ಞ ಡಾ. ಬಿ.ಟಿ.ವಿಜಯ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಮೂಳೆ ಶಸ್ತ್ರ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಹೋಗುವ ಪರಿಸ್ಥಿತಿ ಇತ್ತು. ಆದರೆ ಈಗ ಇಂಥ ವೈದ್ಯರಿಂದ ಉತ್ತಮವಾದ ಕೀಲು ಮತ್ತು ಮೂಳೆ ಶಸ್ತ್ರ ಚಿಕಿತ್ಸೆ ಇಲ್ಲಿಯೇ ಸಿಗುವಂತಾಗಿದೆ ಎಂದರು.
ರೋಟರಿ ಕ್ಲಬ್ ಸದಸ್ಯ ಎಸ್.ಟಿ.ಗೌಡ ಮಾತನಾಡಿ, ಕೊಪ್ಪ, ಶೃಂಗೇರಿ, ಜಯಪುರ, ಬಾಳೆಹೊನ್ನೂರಿನಿಂದಲೂ ಮೂಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದರು.
ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಭಾರತದ ಖ್ಯಾತ ವೈದ್ಯರಾಗಿದ್ದ ಡಾ. ಬಿ.ಸಿ. ರಾಯ್ ಸ್ಮರಣಾರ್ಥ ಜು.1ರಂದು ವೈದ್ಯರ ದಿನ ಆಚರಿಸಲಾಗುತ್ತದೆ ಎಂದರು.
ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್, ನಿಯೋಜಿತ ಕಾರ್ಯದರ್ಶಿ ಮನೋಜ್‌ಕುಮಾರ್, ಸಿ.ರಾಘವೇಂದ್ರ, ಪಿ.ಪವನ್ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.