ನಗರದ ಕಲ್ಯಾಣನಗರದ ಅರಿವಿನ ಮನೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೂತನ ತಾಲೂಕು ಅಧ್ಯ ಕ್ಷರ ಸೇವಾದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕವಿಗಳು, ಕಲಾಸಕ್ತರು ಹಾಗೂ ಲೇಖಕರನ್ನು ಸೆಳೆಯುವಲ್ಲಿ ಸರ್ಕಾರದ ಸ್ವಾಯತ್ತ ಸಂಸ್ಥೆ ಕಸಾಪ ಅತ್ಯುತ್ತಮವಾದ ಕಾರ್ಯಚಟುವಟಿಕೆ ನಿರ್ವಹಿಸುತ್ತಿದೆ. ಕೇವಲ ಭಾಷೆಯಷ್ಟೇ ಅಲ್ಲದೇ, ನಾಡಿನ ನೆಲ, ಜಲ ಅಥ ವಾ ಸಾಹಿತ್ಯಕ್ಕೆ ಧಕ್ಕೆಯಾದಲ್ಲಿ ಕಸಾಪ ಗಟ್ಟಿಧ್ವನಿಯಲ್ಲಿ ನಿಲ್ಲುತ್ತಿದೆ ಎಂದು ತಿಳಿಸಿದರು.
ನಾಡಿನ ಭಾಷಾ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಲಭಿಸುವುದು ಸುಲಭದ ಮಾತಲ್ಲ. ಗಟ್ಟುನಿಟ್ಟು, ಎಲ್ಲಾ ಕನ್ನಡಿಗರನ್ನು ಒಂದೂಗೂಡಿಸುವ ಶಕ್ತಿ ಹೊಂದಿರಬೇಕು. ಆ ನಿಟ್ಟಿನಲ್ಲಿ ನೂತನ ಅಧ್ಯಕ್ಷ ರು ಸಮರ್ಥವಾಗಿ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದ ಅವರು ಹಿಂದೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವೇ ದಾರಿಮಾಡಿಕೊಡಲಿದೆ ಎಂದರು.
ಕಸಾಪ ತಾಳೂಕು ನೂತನ ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಮಾತನಾಡಿ, ಕಸಾಪದಲ್ಲಿ ಸೇವೆ ಸಲ್ಲಿಸುವು ದು ಒಂದು ಪುಣ್ಯದ ಕೆಲಸ. ಪ್ರಸ್ತುತ ಸಾಹಿತ್ಯ ವೇದಿಕೆ ಅನೇಕ ಸವಲತ್ತನ್ನು ಒದಗಿಸಿದೆ. ಅಲ್ಲದೇ ತಮ್ಮ ಹಿಂದಿನ ಸಾಹಿತ್ಯ ಕ್ಷೇತ್ರದ ಸಾಧನೆ ಗುರುತಿಸಿ ತಾಲೂಕು ಘಟಕಕ್ಕೆ ಆಯ್ಕೆ ಮಾಡಿದ್ದು ಇದನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಘಟಕಕ್ಕೆ ನೇಮಕಗೊಂಡ ಕೆಲವೇ ದಿನಗಳಲ್ಲಿ ಅನೇಕರಿಂದ ಕೆಲವು ಪ್ರಶ್ನೆಗಳು ಉದ್ಬವಿಸಿದವು. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೇ ಸೇವಾಕಾರ್ಯಕ್ಕೆ ಮಾತ್ರ ಒತ್ತು ನೀಡಿದ್ದೇನೆ. ಟೀಕೆ-ಟಿಪ್ಪಣಿ ಪ್ರತಿಯೊಬ್ಬ ಮನುಷ್ಯನಿಗೂ ಸಹಜ. ಯಾವುದಕ್ಕೂ ಓಡಿ ಹೋಗುವುದಿಲ್ಲ. ಉಳಿದಿರುವ ಅವಧಿಯನ್ನು ಸೂಕ್ತ ರೀತಿ ಯಲ್ಲಿ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಕನ್ನಡ ಕೆಲಸ ಮಾಡುವಲ್ಲಿ ಇತರೆ ಸಂಘ-ಸಂಸ್ಥೆಗಳಿಗಿಂತ, ಕಸಾಪದಲ್ಲಿ ಒಂದು ಗೌರವಿದೆ. ಸರ್ವರ ಪ್ರೀತಿ, ವಿಶ್ವಾಸವ ನ್ನು ಗಳಿಸಿಕೊಂಡಲ್ಲಿ ಭವಿಷ್ಯದಲ್ಲಿ ಜಿಲ್ಲಾಧ್ಯಕ್ಷರಾಗಬಹುದು. ಸ್ಥಾನ ಲಭಿಸಿದಾಗ ಅದರಲ್ಲಿ ಬಾಳಬೇಕೇ ಹೊರತು, ಅತಿಯಾಗಿ ಬೀಗಬಾರದು ಎಂದು ಹೇಳಿದರು.
ಇದೇ ವೇಳೆ ನೂತನ ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಅವರಿಗೆ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಕಸಪ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ನಗರಾಧ್ಯಕ್ಷೆ ರೂಪನಾಯ್ಕ್, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಕನ್ನಡಶ್ರೀ ಪ್ರಶಸ್ತಿ ವಿಜೇತ ಗುರುವೇಶ್ ಮತ್ತಿತರರು ಉಪಸ್ಥಿತರಿದ್ದರು.