ಕಡೂರು ತಾಲೂಕಿನಲ್ಲಿ ಶೇ.52.08ರಷ್ಟು ಪ್ರಗತಿ

ಕಡೂರು 120ರ ಮತಗಟ್ಟೆ ಕೇಂದ್ರ ವ್ಯಾಪ್ತಿಯ ನಿವಾಸಿಗರಿಗೆ ಗಣತಿ ಅರ್ಜಿಯನ್ನು ಮತದಾರ ನೋಂದಣಾಧಿಕಾರಿ ಎಂ.ತಿರುಮಲೇಶ್ ವಿತರಿಸಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಗೋಪಾಲ್ ಜಾಧವ್ ಇತರರಿದ್ದರು.
ಕಡೂರು 120ರ ಮತಗಟ್ಟೆ ಕೇಂದ್ರ ವ್ಯಾಪ್ತಿಯ ನಿವಾಸಿಗರಿಗೆ ಗಣತಿ ಅರ್ಜಿಯನ್ನು ಮತದಾರ ನೋಂದಣಾಧಿಕಾರಿ ಎಂ.ತಿರುಮಲೇಶ್ ವಿತರಿಸಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಗೋಪಾಲ್ ಜಾಧವ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 759 ಮತಗಟ್ಟೆ ಸಹಾಯಕರು
  • 107673 ಫಾರ್ಮ್‌
ಕಡೂರು: ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಡಿಜಿಟಲೀಕರಣದಲ್ಲಿ ಶೇ.52.08ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮತದಾರ ನೋಂದಣಾಧಿಕಾರಿ ಎಂ.ತಿರುಮಲೇಶ್ ತಿಳಿಸಿದರು.
ವಿಧಾನಸಭಾ ಕ್ಷೇತ್ರದಲ್ಲಿ 206740 ಮತದಾರರಿದ್ದು, 205158 ಮತದಾರರಿಗೆ ಗಣತಿ ನಮೂನೆಗಳನ್ನು ನೀಡಲಾಗಿದೆ. 107673 ಫಾರ್ಮ್‌ಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 99067 ಮತದಾರರ ಡಿಜಿಟಲೀಕರಣ ಬಾಕಿ ಉಳಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಡೂರು ಕ್ಷೇತ್ರದಲ್ಲಿ ಈವರೆಗೆ 199230 (ಶೇ.96.37) ಮತದಾರರ ಮ್ಯಾಪಿಂಗ್ ಕಾರ್ಯ ಮುಗಿದಿದೆ. 8 ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಆಫೀಸರ್‌ಗಳನ್ನಾಗಿ ನೇಮಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಕಡೂರು ಮತ್ತು ಬೀರೂರು ಪುರಸಭೆ ಸೇರಿದಂತೆ 253 ಮತಗಟ್ಟೆಗಳಿವೆ. 253 ಮತಗಟ್ಟೆ ಅಧಿಕಾರಿಗಳು, 46 ಮತಗಟ್ಟೆ ಮೇಲ್ವಿಚಾರಕರು, 759 ಮತಗಟ್ಟೆ ಸಹಾಯಕರು ಐಎಸ್‌ಆರ್ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ತಾಪ್ತಿಯ ಸಖರಾಯಪಟ್ಟಣ ಹೋಬಳಿಯಲ್ಲಿ 50 ಮತಗಟ್ಟೆಗಳಿದ್ದು, 50 ಮತಗಟ್ಟೆ ಅಧಿಕಾರಿಗಳು, 12 ಮೇಲ್ವಿಚಾರಕರು, 150 ಮತಗಟ್ಟೆ ಸಹಾಯಕರು, ಒಬ್ಬರು ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ 44988 ಮತದಾರರಿದ್ದಾರೆ. 43743 ಮತದಾರರ ಮ್ಯಾಪಿಂಗ್ ಕಾರ್ಯ ಮುಗಿದಿದೆ. 25869 ಇಎಫ್‌ಗಳ ಡಿಜಿಟಲೀಕರಣ ಮಾಡಲಾಗಿದ್ದು, ಒಟ್ಟಾರೆ ಸಖರಾಯಪಟ್ಟಣದ ಹೋಬಳಿ ಭಾಗದಲ್ಲಿ ಶೇ.57.50 ಪ್ರಗತಿ ಸಾಧಿಸಲಾಗಿದೆ ಎಂದರು. ಆ.5ರಂದು ಕರಡು ಮತದಾರರ ಅಂತಿಮ ಪಟ್ಟಿ ಪ್ರಕಟವಾಗುತ್ತದೆ. ಆಗ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಮನವಿ ಸಲ್ಲಿಸಬಹುದು. ಮ್ಯಾಪಿಂಗ್ ಕಾರ್ಯ ಆಗದವರ ಪಟ್ಟಿ ತಯಾರಿಸಿ ಅವರಿಗೆ ನೋಟಿಸ್ ನೀಡಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯ ಮಾಡಲಾಗುವುದು. ಈ ಎಲ್ಲ ಕಾರ್ಯ ಮುಗಿದ ನಂತರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಉಪಯೋಗಕ್ಕಾಗಿ 4 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾವುದೇ ಸಹಾಯ ಬೇಕಿದ್ದರೆ ಸಹಾಯ ಕೇಂದ್ರದ ಉಪಯೋಗ ಪಡೆಯಬಹುದು ಎಂದು ಎಂ.ತಿರುಮಲೇಶ್ ತಿಳಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net