ಶೃಂಗೇರಿ ಕ್ಷೇತ್ರದ ವಿವಿಧೆಡೆ 5 ಸಾವಿರ ಗಿಡಗಳ ನಾಟಿ

ಬಾಳೆಹೊನ್ನೂರಿನ ಬೈರೇಗುಡ್ಡ ಹಿಂದು ರುದ್ರಭೂಮಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹಾಗೂ ಬಿಜೆಪಿಯಿಂದ ವಿವಿಧ ಗಿಡಗಳನ್ನು ನೆಡಲಾಯಿತು.
ಬಾಳೆಹೊನ್ನೂರಿನ ಬೈರೇಗುಡ್ಡ ಹಿಂದು ರುದ್ರಭೂಮಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹಾಗೂ ಬಿಜೆಪಿಯಿಂದ ವಿವಿಧ ಗಿಡಗಳನ್ನು ನೆಡಲಾಯಿತು.
Published on
ಬಾಳೆಹೊನ್ನೂರು: ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರಾದ್ಯಂತ 5 ಸಾವಿರ ವಿವಿಧ ಪರಿಸರ ಪೂರಕ ಗಿಡಗಳನ್ನು ನೆಡಲಾಗುತ್ತಿದೆ ಎಂದು ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ತಿಳಿಸಿದರು.
ಪಟ್ಟಣದ ಭೈರೇಗುಡ್ಡದ ಹಿಂದೂ ರುದ್ರಭೂಮಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹಾಗೂ ಬಿಜೆಪಿ ಹೋಬಳಿ ಘಟಕ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 12 ವರ್ಷದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರು 12 ವರ್ಷಗಳಿಂದ ದೇಶದ ಹಿತ ಚಿಂತನೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪರ ಆಡಳಿತ ನೀಡಿದ್ದಾರೆ. ಅವರ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ. ಈ ವೇಳೆ ವಿಶ್ವ ಪರಿಸರ ದಿನ ಇರುವುದರಿಂದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಬಿಜೆಪಿ ಸಹಯೋಗದಲ್ಲಿ ಕ್ಷೇತ್ರದ 175 ಶಾಲೆಗಳಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಮೋದಿ ಅವರ ಸ್ವಚ್ಛತೆ ಹಾಗೂ ಪರಿಸರ ಬೆಳವಣಿಗೆಯನ್ನು ಆದ್ಯತೆಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಪರಿಸರ ಉಳಿಸಿ ಸ್ವಚ್ಛತೆ ಕಾಪಾಡುವುದು ನಮ್ಮ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಪರಿಸರ ಪೂರಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಬಿಜೆಪಿ ಮುಖಂಡರಾದ ಪ್ರಭಾಕರ್ ಪ್ರಣಸ್ವಿ, ಎ.ಸಿ.ಸಂತೋಷ್ ಅರೆನೂರು, ಸತೀಶ್ ಅದ್ದಡ, ಅನೂಪ್ ನಾರ್ವೆ, ಪ್ರದೀಪ್ ಕಿಚ್ಚಬ್ಬಿ, ಕೋಕಿಲಮ್ಮ, ಕೆ.ಟಿ.ವೆಂಕಟೇಶ್, ಚಂದ್ರಶೇಖರ್ ಬನ್ನೂರು, ಎಂ.ಜಿ.ಪ್ರವೀಣ್, ಸತೀಶ್ ಗದ್ದೆಮನೆ, ರಘು ಉಜ್ಜಿನಿ, ಕೆ.ಎ.ವಿವೇಕ್, ರಕ್ಷಿತ್ ಸಮುತ್ಕರ್ಷ, ರಾಘವೇಂದ್ರ ಹಂಚಿನಮನೆ, ಸುನೀಲ್ ನೆಲ್ಲಿಮಕ್ಕಿ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net