ಬೀರೂರಲ್ಲಿ ನಾಯಿ ದಾಳಿಗೆ 20 ಕುರಿಗಳ ಸಾವು

ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದ ಜಮೀನಿನಲ್ಲಿ ನಾಯಿ ದಾಳಿಗೆ ಬಲಿಯಾಗಿರುವ ಕುರಿಗಳು.
ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದ ಜಮೀನಿನಲ್ಲಿ ನಾಯಿ ದಾಳಿಗೆ ಬಲಿಯಾಗಿರುವ ಕುರಿಗಳು.
Published on
ಬೀರೂರು: ಜೋಡಿ ತಿಮ್ಮಾಪುರದಲ್ಲಿ ಶುಕ್ರವಾರ ಕುರಿ ಮಂದೆ ಮೇಲೆ ನಾಯಿಗಳು ದಾಳಿ ಮಾಡಿದ್ದರಿಂದ 20 ಕುರಿಗಳು ಮೃತಪಟ್ಟಿವೆ.
ಹಿರಿಯೂರು ತಾಲೂಕಿನ ಪಿಲಾಜನಹಳ್ಳಿಯ ಶಿವಪ್ಪ ಎಂಬುವವರು ಸುಮಾರು 400 ಕುರಿಗಳಿರುವ ಮಂದೆಯನ್ನು ಜೋಡಿತಿಮ್ಮಾಪುರದ ಗ್ರಾಮದ ಕುಮಾರ ಎಂಬುವವರ ತೆಂಗಿನ ತೋಟದಲ್ಲಿ ನಿಲ್ಲಿಸಿದ್ದರು. ಕುರಿಗಳನ್ನು ಮೇಯಿಸಲು ಹೋದಾಗ ಏಕಾಏಕಿ 40ಕ್ಕೂ ಹೆಚ್ಚು ಕುರಿಗಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಈ ಪೈಕಿ 20 ಕುರಿಗಳು ನಾಯಿಕಡಿತದಿಂದ ಮೃತಪಟ್ಟಿವೆ. ಹಿರಿಯೂರಿನಿಂದ ವಲಸೆ ಬಂದಿರುವ ನಾವು ಜಮೀನು ಹಾಗೂ ತೋಟಗಳಲ್ಲಿ ಕುರಿಗಳನ್ನು ನಿಲ್ಲಿಸುತ್ತೇವೆ. ಜಮೀನುಗಳಲ್ಲಿ ದಿನಕ್ಕೆ ಇಟ್ಟು ಎಂದು ಹಣ ಪಡೆಯುತ್ತವೆ. ಇಂತಹ ಸಮಯದಲ್ಲಿ ನಾಯಿಗಳ ದಾಳಿಗೆ 20 ಕುರಿಗಳು ಮೃತಪಟ್ಟಿರುವುದರಿಂದ ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಶಿವಪ್ಪ ಅಳಲು ತೋಡಿಕೊಂಡರು.
ಪಶು ವೈದ್ಯಾಧಿಕಾರಿ ಡಾ.ಮೋಹನ್ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಾಡುಗೊಲ್ಲರ ಸಂಘದ ಅಧ್ಯಕ್ಷ ಈರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ದೇವೀರಪ್ಪ, ಅಜ್ಜಂಪುರ ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ತಿಮ್ಮಯ್ಯ,ಶೇಖರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net