

ಶೃಂಗೇರಿ: ಮಲೆನಾಡಿನಲ್ಲಿ ಜೀಪ್ ರ್ಯಾಲಿಗಳು ನಡೆಯುವುದು ವಿರಳ. ರ್ಯಾಲಿಗಳು ವಿದೇಶಗಳಲ್ಲಿ ಮಾತ್ರ ನಡೆಯುತ್ತಿದ್ದವು. ಪ್ರಸ್ತುತ ರ್ಯಾಲಿಯನ್ನು ನಡೆಸುವ ಸ್ಥಳೀಯ ಯುವಕರ ಉತ್ಸಾಹ ಶ್ಲಾಘನೀಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಶನಿವಾರ ಶೃಂಗೇರಿ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಮಲೆನಾಡು ತ್ರಿಲ್ಸ್ ಮೋಟಾರ್ ರ್ಯಾಲಿ ಉದ್ಘಾಟಿಸಿ ಮಾತನಾಡಿದರು. ಇಂಥ ರ್ಯಾಲಿಗಳನ್ನು ನಡೆಸಲು ಡಿಸೆಂಬರ್ನಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಕಾನೂನು ರೂಪಿಸಿ ಈ ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ. ಇಂಥ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ದೊರಕುತ್ತದೆ ಎಂದರು.
ರಾಜ್ಯ ಮತ್ತು ಹೊರ ರಾಜ್ಯದಿಂದ 120 ಜೀಪ್ಗಳ ಚಾಲಕರು ಭಾಗವಹಿಸಿದ್ದರು. ನದಿ, ಗುಡ್ಡಗಾಡು ಪ್ರದೇಶ, ಹಳ್ಳ ಮತ್ತು ಗುಡ್ಡ ಹತ್ತುವ ಪ್ರದೇಶಗಳಲ್ಲಿ ಆಕರ್ಷಕವಾಗಿ ರ್ಯಾಲಿ ನಡೆಸಲಾಯಿತು. ಮೋಟಾರ್ ರ್ಯಾಲಿ ಚಾಲನೆಯಲ್ಲಿ ಸಾಧನೆ ಮಾಡಿದ ಅಲ್ವಿನ್ ಅಪ್ಪಣ್ಣ ಹಾಗೂ ಶ್ರೀಕಾಂತ್ ಅವರನ್ನು ಗೌರವಿಸಲಾಯಿತು.
ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ, ವಿಶ್ವನಾಥ್ ಗದ್ದೆಮನೆ, ಶೃಂಗೇರಿ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಧರ್ಮಪ್ಪ ಹೆಗ್ಡೆ, ಉಪಾಧ್ಯಕ್ಷ ಚೇತನ್ ಗೌಡ, ಕಾರ್ಯದರ್ಶಿ ಪಾಲ್ಗುಣ, ಗೌರವಾಧ್ಯಕ್ಷ ಡಿ.ಮಹೇಶ್, ಸದಸ್ಯರಾದ ಭರತ್ ಗೌಡ ಗಿಣಿಕಲ್ ಇತರರಿದ್ದರು.