ಮ್ಯಾಮ್ಕೋಸ್‌ಗೆ 1,064 ಹೊಸ ಸದಸ್ಯರ ಸೇರ್ಪಡೆ

ಶೃಂಗೇರಿಯಲ್ಲಿ ಏರ್ಪಡಿಸಿದ್ದ ಮ್ಯಾಮ್ಕೋಸ್ ಸದಸ್ಯರ ಸಭೆಯನ್ನು ಸಂಸ್ಥೆ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಉದ್ಘಾಟಿಸಿದರು.
ಶೃಂಗೇರಿಯಲ್ಲಿ ಏರ್ಪಡಿಸಿದ್ದ ಮ್ಯಾಮ್ಕೋಸ್ ಸದಸ್ಯರ ಸಭೆಯನ್ನು ಸಂಸ್ಥೆ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಉದ್ಘಾಟಿಸಿದರು.
Published on
ಶೃಂಗೇರಿ: ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದಲ್ಲಿ 31ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಹಾಲಿ ಈ ವರ್ಷ 1,064 ಹೊಸ ಸದಸ್ಯರ ಸೇರ್ಪಡೆಯಾಗಿದೆ. ಮೂರು ಜಿಲ್ಲೆ ವ್ಯಾಪ್ತಿಯ 17 ತಾಲೂಕುಗಳನ್ನು ಒಳಗೊಂಡಿರುವ ಸಂಸ್ಥೆ 19 ಚುನಾಯಿತ ಸದಸ್ಯರನ್ನು ಒಳಗೊಂಡಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಹೇಳಿದರು.
ಪಟ್ಟಣದ ಶ್ರೀಚಪ್ಪರದಾಂಜನೇಯ ಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮ್ಯಾಮ್ಕೋಸ್ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಶಿವಮೊಗ್ಗ ಕೇಂದ್ರ ಕಚೇರಿಯಲ್ಲಿ ಆ.30ರಂದು ಸರ್ವ ಸದಸ್ಯರ ಸಭೆ ನಡೆಯಲಿದೆ. ತಾಲೂಕಿನಲ್ಲಿ 2,093 ಷೇರುದಾರರಿದ್ದು, 977 ಸಕ್ರೀಯ ಸದಸ್ಯರಿದ್ದಾರೆ. ಇದರಲ್ಲಿ 700ಕ್ಕೂ ಹೆಚ್ಚು ರೈತರು ಗುಂಪು ವಿಮೆ ಮಾಡಿಸಿದ್ದಾರೆ. 2025ರಲ್ಲಿ ಸ್ಥಳೀಯ ಶಾಖೆಯಲ್ಲಿ 10,194ಅಡಕೆ ಮೂಟೆ ಬಂದಿದ್ದು, 2026ರಲ್ಲಿ 8,860 ಮೂಟೆ ಬಂದಿದೆ ಎಂದರು.
ಸದಸ್ಯ ಹುಲ್ಸೆ ರತ್ನಾಕರ್ ಮಾತನಾಡಿ, ರಾಶಿ ಇಡಿಗೆ ಕಡಿಮೆ ಧಾರಣೆ ಬರುತ್ತಿದ್ದು, ನಾನು ಕೊಂಡೊಯ್ದ ಅಡಕೆಯನ್ನು ವಾಪಾಸ್ ಕಳಿಸಲಾಗಿದೆ. ಗಿರಿಯಪ್ಪ ಗೌಡ ಮಾತನಾಡಿ, ಸರ್ವ ಸದಸ್ಯರ ಸಭೆಗೆ ಶಿವಮೊಗ್ಗಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸುವಂತೆ, ಜಿ.ಜಿ.ಮಂಜುನಾಥ್ ಮೈಲುತುತ್ತಾ ದರ ಇಳಕೆ ಮಾಡುವಂತೆ ಮನವಿ ಮಾಡಿದರು.
ನಿರ್ದೇಶಕರಾದ ಅಂಬ್ಲೂರು ಸುರೇಶ್ಚಂದ್ರ, ಕೆ.ಎಂ.ಶ್ರೀ ನಿವಾಸ್, ಯಡಗೆರೆ ಸುಬ್ಬಣ್ಣ, ಬಿ.ಸಿ.ನರೇಂದ್ರ, ಪ್ರಸನ್ನ ಹೆಬ್ಬಾರ್, ಸದಸ್ಯರಾದ ಶಿವಪ್ಪ, ಗುಂಡಪ್ಪ, ದೇವೇಂದ್ರ, ಸಿದ್ದಪ್ಪಹೆಗ್ಡೆ, ನಟರಾಜ್, ರಮೇಶ್ , ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net