

ಚಿಕ್ಕಮಗಳೂರು: ಸರ್ಕಾರಿ ಕಚೇರಿಗಳಲ್ಲಿ ಬ್ರೋಕರ್ ಹಾವಳಿ ತಪ್ಪಿಸಿ ಅಲ್ಲಿನ ನ್ಯೂನತೆ ಸರಿಪಡಿಸಲು ಅನಿರೀಕ್ಷಿತ ಭೇಟಿ ನೀಡಿ ಸದ್ಯದಲ್ಲಿಯೇ ಜನಸಂಪರ್ಕ ಸಭೆ ನಡೆಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್.ರಮೇಶ್ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ನೇರವಾಗಿ ಸಮಸ್ಯೆ ಹೇಳಿದಾಗ ವಾಸ್ತವ ಪರಿಸ್ಥಿತಿ ಅರಿವಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ವ್ಯವಸ್ಥೆ ಸರಿಪಡಿಸಲು ಅನಿರೀಕ್ಷಿತ ಭೇಟಿ ನೀಡಲಾಗುವುದು ಎಂದು ಹೇಳಿದರು. ನಗರಸಭೆಯಲ್ಲಿ ಕೆಲವು ಸಾಫ್ಟ್ವೇರ್ನಲ್ಲಿ ಬದಲಾವಣೆ ಮತ್ತು ನ್ಯೂನತೆ ಸರಿಪಡಿಸುವ ಬಗ್ಗೆ ಕೇಂದ್ರ ಕಚೇರಿಗೆ ಪತ್ರ ಬರೆದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದೆ. ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.