ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಚಿಕ್ಕಮಗಳೂರು ಫಸ್ಟ್

17MDG1
Published on

ಮೂಡಿಗೆರೆ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪಂಚಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಮಧ್ಯವರ್ತಿಗಳಿಲ್ಲದೆ ಪ್ರತಿ ಫಲಾನುಭವಿಗಳ ಮನೆಗೆ ಸರ್ಕಾರದ ಯೋಜನೆ ತಲುಪಿಸಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ ಹೇಳಿದರು.

ತಾಪಂ ಪಂಡಿತ್ ದೀನದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ್ದರಿಂದ ಪ್ರತಿಯೊಬ್ಬರ ಖಾತೆಗೆ ಮಾಸಿಕ 171 ರೂ ಜಮೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಮಾಸಿಕ 13 ಕೋಟಿ ರೂ., ವಾರ್ಷಿಕ 190 ಕೋಟಿ ರೂ. ಖರ್ಚಾಗುತ್ತದೆ. ಮಹಿಳೆಯರನ್ನು ಮನೆಯ ಯಜಮಾನಿ ಎಂದು ನಾಮಕರಣಗೊಳಿಸಿ ಜಿಲ್ಲೆಯಲ್ಲಿ ಈವರೆಗೆ 2.62 ಲಕ್ಷ ಮಹಿಳೆಯರ ಖಾತೆಗೆ ಮಾಸಿಕ 2 ಸಾವಿರ ರೂ. ಪಾವತಿಸಲಾಗಿದೆ ಎಂದರು.

ಶಕ್ತಿ ಯೋಜನೆ ಆರಂಭವಾದಾಗ ಬಸ್‌ನಲ್ಲಿ ಪ್ರಯಾಣಿಕರ ನೂಕುನುಗ್ಗಲು ಇತ್ತು. ಈಗ ಸರ್ಕಾರ ಹೆಚ್ಚುವರಿ ಬಸ್‌ಗಳನ್ನು ಒದಗಿಸಿಸಲಾಗಿದೆ. ಜಿಲ್ಲೆಯ ಕೆಎಸ್‌ಆರ್ ಟಿಸಿಗೆ ಸರ್ಕಾರ 131 ಕೋಟಿ ರೂ. ಪಾವತಿಸಿದೆ. ಈ ಯೋಜನೆಯಿಂದ ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಜಿಲ್ಲಾ ಸಮಿತಿ ಸದಸ್ಯ ಜೇಮ್ಸ್, ತಾಲೂಕು ಸಮಿತಿ ಸದಸ್ಯರಾದ ಹೊಸಕೆರೆ ರಮೇಶ್, ಬಿ.ಕೆ.ಜಯಮ್ಮ, ಶ್ರೀನಿವಾಸ್, ನಾರಾಯಣ, ಅರುಣ ಗುತ್ತಿ, ಮೆಲ್ವಿನ್, ಇಒ ದಯಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net