ಚಿಕ್ಕಮಾದಿನಾಳಕ್ಕೆ ದಿಂಡಿ ಪಾದಯಾತ್ರೆ

Dindi Padayatra
ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಪೂಜೇಶ್ವರ ದೇವಸ್ಥಾನಕ್ಕೆ ಮಂಗಳವಾರ ಬಾದನಹಟ್ಟಿ ಗ್ರಾಮದ ದಿಂಡಿ ಪಾದಯಾತ್ರೆ ಆಗಮಿಸಿತು. ಹರಿ ಭಕ್ತ ಪಂಡಿತ ರಾಮಪ್ಪ, ದಮ್ಮೂರು ಬಸವರಾಜ ಇತರರಿದ್ದರು.
Published on

ಕನಕಗಿರಿ: ಆಷಾಢ ನಿಮಿತ್ತ ಬಳ್ಳಾರಿ ಜಿಲ್ಲೆಯ ಬಾದನಹಟ್ಟಿ ಗ್ರಾಮದಿಂದ ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯು ಮಂಗಳವಾರ ತಾಲೂಕಿನ ಚಿಕ್ಕಮಾದಿನಾಳದ ಪೂಜೇಶ್ವರ ದೇವಸ್ಥಾನಕ್ಕೆ ಆಗಮಿಸಿತು.

ಹರಿ ಭಕ್ತ ಪಂಡಿತ ರಾಮಪ್ಪ ಇವರ ನೇತೃತ್ವದಲ್ಲಿ 35 ಭಕ್ತರು ಕಳೆದ ಭಾನುವಾರದಂದು ಬಾದನಹಟ್ಟಿ ಗ್ರಾಮದಿಂದ ಪಂಢರಪುರಕ್ಕೆ ದಿಂಡಿ ಪಾದಯಾತ್ರೆ ಕೈಗೊಂಡಿದ್ದು, ಚಿಕ್ಕಮಾದಿನಾಳಕ್ಕೆ ಆಗಮಿಸಿ ಪೂಜೇಶ್ವರ ದೇವಸ್ಥಾನದಲ್ಲಿ ವೀಣೆ, ತುಳಸಿ ಕಟ್ಟೆಯನ್ನಿರಿಸಿ ಭಜನೆ ಮಾಡಿದರು. ನಂತರ ಪ್ರಸಾದ ಸ್ವೀಕರಿಸಿದರು.

ಕಳೆದ 30 ವರ್ಷಗಳಿಂದ ನಮ್ಮ ಗ್ರಾಮದಿಂದ ಪಂಢರಪುರಕ್ಕೆ ದಿಂಡಿ ಪಾದಯಾತ್ರೆ ಕೈಗೊಳ್ಳುತ್ತಿದ್ದು, ದಿನಕ್ಕೆ 30 ರಿಂದ 40 ಕಿ.ಮೀ ಪಾದಯಾತ್ರೆ ಹೋಗುತ್ತೇವೆ. ಯಾತ್ರೆ ಕೈಗೊಳ್ಳುವ ಮಾರ್ಗದಲ್ಲಿ ಕೆಲ ಭಕ್ತರು ಪ್ರಸಾದ ವ್ಯವಸ್ಥೆ ಕಲ್ಪಿಸುತ್ತಾರೆ. ಇಲ್ಲದಿದ್ದಲ್ಲಿ ನಾವೇ ತಯಾರಿಸಿಕೊಳ್ಳುತ್ತೇವೆ ಎಂದು ಸಂತ ತಿಮ್ಮಪ್ಪ ತಿಳಿಸಿದರು. ಭಕ್ತರಾದ ಪಾಂಡು, ದಮ್ಮೂರು ಬಸವರಾಜ ಸೇರಿ ಮಹಿಳಾ ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net