ಬಸವನಹಳ್ಳಿಯಲ್ಲಿ ಚಿಕ್ಕಳಮ್ಮ ದೇವಿ ಹಬ್ಬ

07-kkr1( 7-24
ಚಿಕ್ಕಳಮ್ಮ ದೇವಿಯನ್ನು ವಿಶೇಷವಾಗಿ ಅಲಂಕರಿಸಿರುವುದು.
Published on

ಕಿಕ್ಕೇರಿ: ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಚಿಕ್ಕಳಮ್ಮ ದೇವಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ರಾಮಯ್ಯನವರ ಮನೆಯಲ್ಲಿ ಮರದ ಕುಕ್ಕೆಯಲ್ಲಿ ಇರಿಸಲಾಗಿದ್ದ ಚಿಕ್ಕಳಮ್ಮ ದೇವಿಯನ್ನು ಶ್ರದ್ಧಾಭಕ್ತಿಯಿಂದ ಹೊರತೆಗೆಯಲಾಯಿತು. ಬಳಿಕ ದೇವಿಗೆ ಮುಖವಾಡ ಧಾರಣೆ ಮಾಡಿ ಹೊಂಬಾಳೆ ಮುಡಿಸಲಾಯಿತು. ವಿವಿಧ ವಸ್ತ್ರ, ಆಭರಣ, ಪುಷ್ಪಗಳಿಂದ ಅಲಂಕರಿಸಲಾಯಿತು.

ದೇವಿಯನ್ನು ಕುಕ್ಕೆಯಲ್ಲಿ ಇರಿಸಿಕೊಂಡು ಭಕ್ತರು ಪೂಜಿಸಿದರು. ದೇವಿಗೆ ಹಣ್ಣು, ಹೂ, ಕಾಯಿ ಅರ್ಪಿಸಿ ಆರತಿ ಬೆಳಗಿದರು. ಕುರಿ ಬಲಿ ಅರ್ಪಿಸಿ ನೆಂಟರಿಷ್ಟರಿಗೆ ಆತಿಥ್ಯ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net