

ಶಿವಮೊಗ್ಗ: ತಾಲೂಕಿನ ಚಿಕ್ಕಕೂಡಲಿಯಲ್ಲಿ ಕಾರ್ಯಾಚರಣೆ ನಡೆಸಿದ ಸಾಗರ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮಣ್ಣು ಮುಕ್ಕ (ಎರಡು ತಲೆ) ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ್ದು, ಎರಡು ಹಾವು ವಶಕ್ಕೆ ಪಡೆದಿದ್ದಾರೆ.
ಸಕಲೇಶಪುರದ ಕೇಶವ, ಹೊನ್ನಾಳಿ ತಾಲೂಕಿನ ಹೊಸಳ್ಳಿ ಕ್ಯಾಂಪ್‌ನ ಶ್ರೀನಿವಾಸ್ ಮತ್ತು ಲಿಂಗಾಪುರದ ನವೀನ್ ಬಂಧಿತರು. ಬೆಂಗಳೂರು ಅರಣ್ಯ ಘಟಕ ಸಿಐಡಿ ಡಿವೈಎಸ್ಪಿ ಮಂಜುನಾಥ ಮಾರ್ಗದರ್ಶನದಲ್ಲಿ ಸಾಗರ ಅರಣ್ಯ ಸಂಚಾರಿ ದಳದ ಸಬ್‌ಇನ್‌ಸ್ಪೆಕ್ಟರ್ ಬಿ.ಮಲ್ಲಿಕಾರ್ಜುನ ಮತ್ತು ಸಿಬ್ಬಂದಿಗಳಾದ ರಂಗನಾಥ, ಗಣೇಶ್, ರತ್ನಾಕರ್, ಗಿರೀಶ್, ವಿಶ್ವನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.