

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಸ್ಥಳೀಯ ಸಂಘ-ಸಂಸ್ಥೆಗಳಲ್ಲಿ ಸಂಘದ ಏಳಿಗೆಗೆ ಸರ್ವ ಸದಸ್ಯರು ಪಕ್ಷಾತೀತವಾಗಿ ಶ್ರಮಿಸಬೇಕು ಹಾಗೂ ಸಹಕಾರ ನೀಡಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಹೇಳಿದರು.
ಸೂಲಿಬೆಲೆ ಹೋಬಳಿ ಚಿಕ್ಕಕೋಲಿಗ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದರು.
ಪಶುಪಾಲನೆಯಿಂದ ಉತ್ತಮ ಆದಾಯ ನಿರೀಕ್ಷೆ ಮಾಡುವ ನಿಟ್ಟಿನಲ್ಲಿ ಪಶುಗಳಿಗೆ ಉತ್ತಮ ಆಹಾರ ನೀಡಿ ಹಾಲಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಜತೆಗೆ ಡೇರಿಗೂ ಲಾಭ ತರುವ ಕೆಲಸ ಮಾಡಬೇಕು ಎಂದರು.
ಸಾಮಾನ್ಯ ಕ್ಷೇತ್ರದಿಂದ ನಾರಾಯಣಸ್ವಾಮಿ, ಶಂಕರಪ್ಪ, ಬಿ.ರಾಜಣ್ಣ, ಗೋಪಾಲಪ್ಪ, ರಘುನಾಥ್, ನಾರಾಯಣಸ್ವಾಮಿ, ಜಯರಾಮಪ್ಪ, ಮಹಿಳಾ ಕ್ಷೇತ್ರದಿಂದ ಯಶೋಧಮ್ಮ, ಸರಸ್ವತಮ್ಮ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರಾಮಕೃಷ್ಣಪ್ಪ, ಹಿಂದುಳಿದ ಬಿ ಕ್ಷೇತ್ರದಿಂದ ರಘುನಾಥ್, ಪ.ಜಾತಿ ಮೀಸಲು ಕ್ಷೇತ್ರದಿಂದ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಇಲಾಖೆಯ ಚುನಾವಣಾಧಿಕಾರಿ ಮುರಳಿಕೃಷ್ಣ ತಿಳಿಸಿದರು.