ಬಡವರಿಗೆ 2 ಸಾವಿರ ಮಾಸ್ಕ್ ವಿತರಣೆ

C JAJU VITHARANE 06
Published on

ಚಿಕ್ಕಜಾಜೂರು: ಇಲ್ಲಿನ ಸಿದ್ದ ಉಡುಪು ತಯಾರಕ ಅ.ರ.ವ.ಮಂಜುನಾಥ ಸೋಮವಾರ ಬಡ ಜನತೆಗೆ 2 ಸಾವಿರ ಮಾಸ್ಕ್ ವಿತರಣೆ ಮಾಡಿದರು.

ಕುಟುಂಬ ಸದಸ್ಯರ ಸಹಕಾರದಿಂದ ಮನೆಯಲ್ಲಿ ಎರಡು ಸಾವಿರ ಮಾಸ್ಕ್ ತಯಾರಿಸಿ ಬಡವರ ಮನೆ ಮನೆಗೆ ತೆರಳಿ ವಿತರಿಸಿದರು. ಜತೆಗೆ ಕರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘ ಸಂಸ್ಥೆ, ನೌಕರರಿಗೂ ಮಾಸ್ಕ್ ವಿತರಣೆ ಮಾಡಿದರು.

ಕುಮಾರ್ ಬಾಣಗೆರೆ, ಮಾರುತಿ, ನಿಜಲಿಂಗಮ್ಮ, ಪ್ರಕಾಶ ಇವರು ಸಾತ್ ನೀಡಿದರು. ಬಡವರು ಉಚಿತ ಮಾಸ್ಕ್ ಪಡೆಯಲು ಮೋ-9482224999 ಸಂಪರ್ಕಿಸಲು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net