ಹತ್ತು ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ

Arrest Kaidhi
Published on

ಚಿಕ್ಕಜಾಜೂರು: ಹೊಳಲ್ಕೆರೆ ತಾಲೂಕು ಐನಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಗೃಹಿಣಿಯೊಬ್ಬಾಕೆ ತನ್ನ ಹತ್ತು ತಿಂಗಳ ಗಂಡು ಮಗುವನ್ನು ನೀರಿನಲ್ಲಿ ಹತ್ಯೆ ಮಾಡಿ ನಂತರ ತಾನು ನೇಣು ಹಾಕಿಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಶಾಬಾಯಿ (25) ಮೃತೆ. ಇದು ಆತ್ಮಹತ್ಯೆ ಎಲ್ಲ ಎಂದು ಮೃತಳ ಪಾಲಕರು ದೂರು ನೀಡಿದ್ದು, ಆಕೆಯ ಪತಿ, ಸಿನಿಮಾ ನಿರ್ದೇಶಕ ಹೇಮಂತ್ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳ ಬಳಿ ಚೀಟಿ ಸಿಕ್ಕಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೇಮಂತ್ ನಾಯ್ಕ ಹೊಳಲ್ಕೆರೆ ಸಮೀಪದ ಲಂಬಾಣಿಹಟ್ಟಿ ವಾಸಿಯಾಗಿದ್ದು, ಹೊಳಲ್ಕೆರೆ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಆಶಾಬಾಯಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಈತ ಧರ್ಮಪುರ, ಗರಸ್ಯೆ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್‌ಪಿ ರಾಧಿಕಾ, ಹೊಳಲ್ಕೆರೆ ಸಿಪಿಐ ರವೀಶ್, ಚಿಕ್ಕಜಾಜೂರು ಪಿಎಸ್‌ಐ ಮೋಹನ್ ಕುಮಾರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net