ಬಿ.ದುರ್ಗದಲ್ಲಿ ಉರುಸ್-ಗಂಧ ಉತ್ಸವ

C JAJUR DARGA 20
Published on

ಚಿಕ್ಕಜಾಜೂರು: ಸಮೀಪದ ಬಿ.ದುರ್ಗ ಗ್ರಾಮದಲ್ಲಿ ಬುಧವಾರ ಹಿಂದು ಮುಸ್ಲಿಂ ಭಾವೈಕ್ಯದ ಹಜ್ರತ್ ಸೈಯ್ಯದ್ ಶಾ ಅಬ್ದುಲ್ಲಾ ಶಾ ಖಾದ್ರಿ ಅವರ 242ನೇ ಸ್ಮರಣಾರ್ಥ ಉರುಸ್ ಮತ್ತು ಗಂಧ ಉತ್ಸವ ಪ್ರಾರಂಭವಾಯಿತು.

ಗ್ರಾಮದ ಗೌಡರ ದೊಡ್ಡ ರುದ್ರಪ್ಪ ಮನೆಯಿಂದ ಮೆರವಣಿಗೆ ಮೂಲಕ ಗಂಧವನ್ನು ದರ್ಗಾಕ್ಕೆ ತರಲಾಯಿತು. ಮುಸ್ಲಿಮರು ವಿವಿಧ ಬಗೆಯ ಕಬ್ಬಿಣದ ಸಲಾಕೆಯಿಂದ ನಾನಾ ರೀತು ಚಮತ್ಕಾರ ಪ್ರದರ್ಶಿಸಿದರು.

ಗುರುವಾರ ಬೆಳಗ್ಗೆ ದರ್ಗಾದಲ್ಲಿ ಇಸ್ಲಾಂ ಧಾರ್ಮಿಕ ಪದ್ಧತಿಯಂತೆ ವಿಶೇಷ ಪ್ರಾರ್ಥನೆ ನಡೆಯಿತು. ನಂತರ ಐಕ್ಯಸ್ಥಳದಲ್ಲಿ ಹಿಂದು-ಮುಸ್ಲಿಂ ಸಮುದಾಯದವರಿಂದ ಸಕ್ಕರೆ ಸೇವೆ ನಡೆಯಿತು.

ರಾತ್ರಿ ವಿಜಯಪುರದ ದಸ್ತಗಿರಿ ಬಾಸ್ ಅವರಿಂದ ಜನಪದ ಸಾಹಿತ್ಯ ಮತ್ತು ಬೆಂಗಳೂರಿನ ತಾಹಿರ್ ಉಲ್ಲಾ ಖಾನ್, ಕೊಲ್ಲಾಪುರದ ರೆಹಮಾನ್ ಸಂಗಡಿಗರಿಂದ ಕವಾಲಿ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net