

ಖಾನಾಪುರ: ತಾಲೂಕಿನ ಚಿಕ್ಕದಿನಕೊಪ್ಪ ಗ್ರಾಮದ ರೈತ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ
ನಡೆದಿದೆ. ಚಿಕ್ಕದಿನಕೊಪ್ಪ ಗ್ರಾಮದ ಮಹಾವೀರ ಗುಂಡು ಹನಿಗೋಳ (26) ಆತ್ಮಹತ್ಯೆ ಮಾಡಿಕೊಂಡ ರೈತ. ಮಹಾವೀರಗೆ 3-4 ಲಕ್ಷ ಸಾಲವಿತ್ತು. ಸಾಲದ ಚಿಂತೆ ಹೆಚ್ಚಾಗಿ ಮಾನಸಿಕ ಅಸ್ವಸ್ಥನಾಗಿ ಅವರೋಲಿ ಗ್ರಾಮದ ಬಳಿಯ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದಗಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
---
8ಖಾನಾಪುರ8: ಮಹಾವೀರ ಗುಂಡು ಹನಿಗೋಳ