ಚಿಕ್ಕಚೆಲ್ಲೂರು ಲಕ್ಕಮ್ಮದೇವಿ ಉತ್ಸವ

P PURA LAKKAMMADEVI 07
Published on

ಪರಶುರಾಮಪುರ: ಚಿಕ್ಕಚೆಲ್ಲೂರು ಲಕ್ಕಮ್ಮದೇವಿಯ ಹರಕೆಯ ಪೂಜಾ ಉತ್ಸವ ಬುಧವಾರ ನಡೆಯಿತು.
ಪರಶುರಾಮಪುರದ ಭಕ್ತರು, ಚಿಕ್ಕಚೆಲ್ಲೂರು ಗ್ರಾಮದಿಂದ ಮಂಗಳವಾರ ತಮ್ಮ ಕುಲದೇವತೆ ಲಕ್ಕಮ್ಮದೇವಿಯ ಮೂರ್ತಿಗಳನ್ನು ಕಾಲ್ನಡಿಗೆಯಲ್ಲಿ ತಂದು ತಮ್ಮ ಮನೆ ಬಳಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಬುಧವಾರ ಬೆಳಗ್ಗೆ ಗುಡಿಕಟ್ಟೆಯ ಮಹಿಳೆಯರು ಗಂಗಾಪೂಜೆ ನೆರವೇರಿಸಿ, ಮೆರವಣಿಗೆ ನಡೆಸಿದರು.
ಭಕ್ತರಾದ ಬೋರಕ್ಕ, ಬಸವರಾಜು, ಚನ್ನಕೇಶವ, ಲಕ್ಷ್ಮೀದೇವಿ, ಈರಮ್ಮ, ಲಕ್ಕಮ್ಮ, ದೇವಿಕಾ, ಕಾಮಾಕ್ಷಿ, ರಾಜಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net