ತಬ್ಲಿಕ್ ಜಮಾತ ಅನುಸರಿಸದಂತೆ ಜೀವ ಬೆದರಿಕೆ; 7 ಜನರ ವಿರುದ್ಧ ಎಫ್‌ಐಆರ್

Crime Logo
Published on

ಬ್ಯಾಡಗಿ: ತಬ್ಲಿಕ್ ಜಮಾತ ಆಚರಣೆ ಮಾಡುತ್ತಿದ್ದ ವ್ಯಕ್ತಿಗೆ ಸುನ್ನಿ ಪಂಗಡದಲ್ಲಿಯೆ ಇರಬೇಕು ಎಂದು ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಚಿಕ್ಕಬಾಸೂರ ಗ್ರಾಮದ ಜಬಿವುಲ್ಲಾ ಗುಡಮಿಯಾ ಬಂಕಾಪುರ, ರಹೇಮಾನಸಾಬ ಅಬ್ದುಲಸಾಬ ಕಳಗೊಂಡ, ಸತ್ತಾಜಅಲಿ ಪಲ್ಟನ, ಮೇಹಬೂಬ ಮರ್ದಾನಸಾಬ ಹಿರೇಹಳ್ಳಿ, ಇರ್ಫಾನ ಬಾಬುಲಸಾಬ ಮುಲ್ಲಾ, ಗೌಸ ಹುಸೇನಸಾಬ ತಹಸೀಲ್ದಾರ್, ದಾದಾಪೀರ ರೇಹಮಾನಸಾಬ ಕಳಕೊಂಡ ಸೇರಿ 7 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಇವರ ವಿರುದ್ಧ ಅಬ್ದುಲರಶೀದ ಫಕ್ರುಸಾಬ ಗಾಣಗೇರ (41) ಎಂಬುವರು ದೂರು ನೀಡಿದ್ದಾರೆ. ನಾವು ಮನೆಯಲ್ಲಿ ತಬ್ಲಿಕ ಜಮಾತಅನ್ನು ಅನುಸರಿಸುತ್ತಿದ್ದೇವೆ. ಆದರೆ, ಏಳು ಜನ ಆರೋಪಿತರು ನೀವು ಸುನ್ನಿ ಜಮಾತ ಅನುಸರಿಸಬೇಕು. ಇಲ್ಲವಾದರೆ ಊರಿನಿಂದ ನಿಮ್ಮನ್ನು ಹೊರಗೆ ಹಾಕುತ್ತೇವೆ. ನಿನ್ನ ಮಾತ್ರ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net