ಸಂಸದ ಡಾ ಕೆ‌.ಸುಧಾಕರ್ ಜೈಲಿಗೆ ಹೋಗೋದು ಪಕ್ಕಾ, ನಾನೇ ಒಳಗೆ ಕಳುಹಿಸುತ್ತೇನೆ ಎಂದ ಪ್ರದೀಪ್ ಈಶ್ವರ್!

IMG_20240913_205409.jpg
Published on

ಚಿಕ್ಕಬಳ್ಳಾಪುರ: ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ, ಅಡ್ಡ ಮತದಾನ ಮಾಡಿದವರ ಅನರ್ಹತೆಗೊಳಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಪ್ರಾರಂಭವಾಗಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆಕ್ರೋಶದಲ್ಲಿ ಹೇಳಿದರು.
ಚಿಕ್ಕಬಳ್ಳಾಪುರ ನಗರಸಭಾ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮೊದಲಿನಿಂದಲೂ ಕಾಂಗ್ರೆಸ್ ನ 6 ಸದಸ್ಯರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಚುನಾವಣೆಯಲ್ಲಿ ಕೋಟ್ಯಂತರ ಖರ್ಚು ಮಾಡುವ ಶಕ್ತಿ ನಮಗಿಲ್ಲ.‌ಇದಕ್ಕೆ ದುಡ್ಡು ಕೊಟ್ಟು ಗೆಲ್ಲುವ ಕೆಲಸವಾಗಲಿಲ್ಲ ಎಂದರು.
ಸಂಸದ ಡಾ ಕೆ.ಸುಧಾಕರ್ ಕರೊನಾ ನಿರ್ವಹಣೆಯಲ್ಲಿ ಕೋಟ್ಯಂತರ ರೂ ಲೂಟಿ ಹೊಡೆದಿದ್ದು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಕರೊನಾ ಕಳ್ಳ ಜೈಲಿಗೆ ಹೋಗುವುದು ಪಕ್ಕಾ, ನಾನೇ ಒಳಗೆ ಹಾಕಿಸುತ್ತೇನೆ ಎಂದರು.
ಕಾಂಗ್ರೆಸ್ ಗೆ ಕೈ ಕೊಟ್ಟು ಹೋದವರಿಗೆ ನಿಯಮಾನುಸಾರ ಪಾಠ ಕಲಿಸಲಾಗುತ್ತದೆ. ಕೆಲ ಸದಸ್ಯರು ವಿಪ್ ಆದೇಶ ಉಲ್ಲಂಘಿಸಿದ್ದಾರೆ. ಇದರಿಂದ ಸದಸ್ಯತ್ವವನ್ನು  ಅನರ್ಹಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪಕ್ಷ ಮನವಿ ಸಲ್ಲಿಸಲಿದೆ. ಇದರ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆಯಲಿದೆ ಎಂದರು.
ಆಡಳಿತ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸಲಾಗುತ್ತಿದೆ. ಭ್ರಷ್ಟರಿಗೆಲ್ಲ ಪಾಠ ಕಲಿಸಿ, ಜನರಿಗೆ ಉತ್ತಮ ಸೇವೆ ನೀಡಲಾಗುವುದು.‌ ಜತೆಗೆ ಕಾಂಗ್ರೆಸ್ ನಿಷ್ಠೆ ಇಲ್ಲದಿರುವುದನ್ನು ಬಿಟ್ಟು ಪಕ್ಣವನ್ನು ಪ್ರಬಲವಾಗಿ ಸಂಘಟಿಸಲಾಗುವುದು ಎಂದರು.
ಹಣವನ್ನು ಲೂಟಿ ಮಾಡಿ ಅಧಿಕಾರಕ್ಕೆ ಬಂದಿಲ್ಲ. ಇದರಿಂದ ಸಂಸದರು ಇಲ್ಲವೇ ಅವರ ಅಪ್ಪ ಇರಲಿ ಯಾರಿಗೇ ಆಗಲಿ ಭಯಬೀಳುವ ಅವಶ್ಯಕತೆ ಇಲ್ಲ.‌‌ ಯಾರಿಂದಲೂ ನನ್ನ ಕೂದಲನ್ನು ಸಹ ಕೊಂಕಿಸಲು ಆಗುವುದಿಲ್ಲ. ಮುಂಬರುವ ದಿನಗಳಲ್ಲಿ ಆಟ ಹೇಗಿರುತ್ತದೆ ಎನ್ನುವುದು ನೋಡೋಣ ಎಂದು ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net