ಬೈಕ್​ಗೆ ಬಸ್​ ಡಿಕ್ಕಿಯಾಗಿ ಮಹಿಳೆ ಸಾವು

ಮುನಿಲಕ್ಷಮ್ಮ
ಮುನಿಲಕ್ಷಮ್ಮ
Published on

ಚಿಂತಾಮಣಿ: ಮಸ್ತೇನಹಳ್ಳಿ ಕೈಗಾರಿಕಾ ಪ್ರವೇಶದ ಸರ್ಕಲ್​ ಬಳಿ ಆಂಧ್ರದ ಸರ್ಕಾರಿ ಬಸ್​ ಹಾಗೂ ಬೈಕ್​ ನಡುವೆ ಅಂಭವಿಸಿದ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿಡ್ಲಟ್ಟ ತಾಲೂಕಿನ ಕದ್ರಿನಾಯಕನಹಳ್ಳಿಯ ಮುನಿಲಕ್ಷಮ್ಮ(25)ಮೃತೆ. ಬೆಂಗಳೂರು ಕಡೆಯಿಂದ ಚಿಂತಾಮಣಿ ಮಾರ್ಗವಾಗಿ ಮದನಪಲ್ಲಿಗೆ ತೆರಳುತ್ತಿದ್ದ ಬಸ್​ ಮಸ್ತೇನಹಳ್ಳಿ ಕೈವಾರ ಕೈಗಾರಿಕಾ ಪ್ರದೇಶದತ್ತ ತೆರಳುತ್ತಿದ್ದ ಬೈಕ್​ಗೆ ಡಿಕ್ಕಿಯಾಗಿದ್ದು, ಮುನಿಲಕ್ಷ$್ಮಮ್ಮ ತಲೆಗೆ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಕೈವಾರ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net