ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ

ತಹಸೀಲ್ದಾರ್​ ಕೆ.ಎಂ. ಅರವಿಂದ್​ ಹೇಳಿಕೆ
ಗೌರಿಬಿದನುರು ತಾಲೂಕಿನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಮೇವಿನ ಬೀಜದ ಮಿನಿ ಕಿಟ್​ ವಿತರಣಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ಕೆ.ಎಂ. ಅರವಿಂದ್​, ತಾಲೂಕು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಾರುತಿ ಇತರರು ಇದ್ದರು.
ಗೌರಿಬಿದನುರು ತಾಲೂಕಿನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಮೇವಿನ ಬೀಜದ ಮಿನಿ ಕಿಟ್​ ವಿತರಣಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ಕೆ.ಎಂ. ಅರವಿಂದ್​, ತಾಲೂಕು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಾರುತಿ ಇತರರು ಇದ್ದರು.
Published on: 

ಗೌರಿಬಿದನೂರು: ಮಳೆ ಕೊರತೆಯಿಂದ ಮೇವಿನ ಬೆಳೆ ಕಡಿಮೆಯಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ತಹಸೀಲ್ದಾರ್​ ಕೆ.ಎಂ.ಅರವಿಂದ್​ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಪಶುಸಂಗೋಪನಾ ಇಲಾಖೆಯಿಂದ ಹಮ್ಮಿಕೊಂಡಿರುವ ಮೇವಿನ ಬೀಜದ ಮಿನಿ ಕಿಟ್​ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಜಮೀನಿನಲ್ಲಿ ಮೇವು ಬೆಳೆದು, ಜಾನುವಾರುಗಳಿಗೆ ಪೌಷ್ಟಿಕ ಮೇವು ಒದಗಿಸಬೇಕು. ಅವುಗಳ ರಕ್ಷಣೆಯೇ ರೈತರ ಆರ್ಥಿಕ ಸಬಲೀಕರಣ.

ಬೀಜದ ಕಿಟ್​ನಲ್ಲಿ ಜೋಳ, ಮೆಕ್ಕೆಜೋಳ, ಹೆಸರು,ಅಲಸಂದೆ ಸೇರಿ ವಿವಿಧ ತಳಿಯ ಅಧಿಕ ಇಳುವರಿ ನೀಡುವ ಮೇವಿನ ಬೀಜಗಳಿವೆ. ಪ್ರತಿ ರೈತನಿಗೆ 2ರಿಂದ 3 ಕೆಜಿ ಬೀಜದ ಕಿಟ್​ ನೀಡಲಾಗುತ್ತಿದೆ ಎಂದರು.

ತಾಲೂಕು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಾರುತಿ ಮಾತನಾಡಿ, ತಾಲೂಕಿನ ಎಲ್ಲ ಹೋಬಳಿಗಳ ರೈತ ಸಂಪರ್ಕ ಕೇಂದ್ರ, ಪಶು ಆಸ್ಪತ್ರೆಗಳಲ್ಲಿ ಕಿಟ್​ಗಳು ಲಭ್ಯವಿದ್ದು, ಆಸಕ್ತ ರೈತರು ಆಧಾರ್​ ಕಾರ್ಡ್​, ಪಹಣಿ ತಂದು ಪಡೆದುಕೊಳ್ಳಬಹುದು ಎಂದರು.

ನಿರೀಕ್ಷಕ ಖಾದರ್​, ಜೈಪ್ರಕಾಶ್​, ಅಮರ್​ ನಾರಾಯಣ್​, ಕೃಷಿ ಇಲಾಖೆ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net