ನಂದನಹೊಸಹಳ್ಳಿಯ ಎಸ್.ಎನ್.ಶ್ರೀನಿವಾಸ (26)ಹಲ್ಲೆಗೊಳಗಾದವ. ವಿಜಯಪುರ ಖಾಸಗಿ ಕೊರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಒಂದು ವರ್ಷದಿಂದ ಗ್ರಾಮದ ಯುವತಿಯ ಪರಿಚಯದಲ್ಲಿದ್ದರು. 2 ತಿಂಗಳ ಹಿಂದೆ ದೂರವಾಣಿ ಕರೆ ಹಾಗೂ ಸಂದೇಶ ಕಳುಹಿಸಿದ ವಿಚಾರವಾಗಿ ಗ್ರಾಮದ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಆದರೆ ಜು.24ರಂದು ಮಧ್ಯಾಹ್ನ ಶ್ರೀನಿವಾಸ ಕೆಲಸದ ನಿಮಿತ್ತ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕೋರ್ಲಪರ್ತಿ ಬಳಿ ಯುವತಿ ಹಾಗೂ ಪಾಪತಿಮ್ಮನಹಳ್ಳಿಯ ನಾಗೇಶ್, ಕಾಚಹಳ್ಳಿಯ ನರಸಿಂಹಮೂರ್ತಿ ಹಾಗೂ ಇತರ ವ್ಯಕ್ತಿಗಳು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಟನೆಯಲ್ಲಿ ಗಾಯಗೊಂಡ ಶ್ರೀನಿವಾಸನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.