ಪ್ರೀತಿಸಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ಸಂಬಂಧ ಮುರಿದ ಯುವತಿ

ಚಿಕ್ಕಬಳ್ಳಾಪುರದ ಯುವತಿಯೊಂದಿಗೆ ಮದುವೆಯಾಗುತ್ತಿರುವ ಆರೋಪಿ ಸಂದೀಪ್.
ಚಿಕ್ಕಬಳ್ಳಾಪುರದ ಯುವತಿಯೊಂದಿಗೆ ಮದುವೆಯಾಗುತ್ತಿರುವ ಆರೋಪಿ ಸಂದೀಪ್.
Published on

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಕೆಲವೇ ಗಂಟೆಗಳ ಅವಧಿಯಲ್ಲಿ ಪ್ರೇಮಿಗಳು ಸಂಬಂಧವನ್ನು ಮುರಿದುಕೊಂಡಿದ್ದು ನಗರ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣವು ಚರ್ಚೆಗೆಗ್ರಾಸವಾಗಿದೆ.
ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ಪೇಂಟರ್‌ ಸಂದೀಪ್ ಹಾಗೂ ಇಲ್ಲಿನ ಕಂದವಾರಪೇಟೆಯ ೧೮ ವರ್ಷದ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಹುಡುಗಿಯ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲ್ಲೆ, ಗಲಾಟೆಗಳು ನಡೆದಿವೆ. ಇದಕ್ಕೂ ಜಗ್ಗದೇ ಪ್ರೇಮಿಗಳು ಮದುವೆ ಮಾಡಿಕೊಂಡು ಬಂದರೂ ಸಹ ಪೊಲೀಸ್‌ ಠಾಣೆಯಲ್ಲಿ ಯುವತಿಯು ಪ್ರೇಮಿಗೆ ಕೈ ಕೊಟ್ಟಿದ್ದಾಳೆ. ಸಂಬಂಧವನ್ನು ಮುರಿದುಕೊಂಡು ಪಾಲಕರೊಂದಿಗೆ ತೆರಳಿದ್ದಾಳೆ.

*ಪ್ರೇಮಿಯ ವಿರುದ್ಧ ಆರೋಪ*
ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿ ರಕ್ಷಣೆಗಾಗಿ ಪೊಲೀಸ್‌ ಠಾಣೆಗೆ ಬಂದ ಯುವತಿಗೆ ಹಿಂದೆ ಪ್ರಿಯಕರನಿಗೆ ಸಂಬಂಧಿಸಿದ ವಿವಾದಿತ ಪ್ರಕರಣಗಳ ಮಾಹಿತಿ ನೀಡಿದ್ದಾರೆ. 2024ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ರ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣ, ಪ್ರಶಾಂತ್ ನಗರದಲ್ಲಿ ಮಹಿಳೆಯೊಬ್ಬರಿಗೆ ವಂಚಿಸಿದ್ದರ ಬಗ್ಗೆ ಠಾಣೆಯಲ್ಲಿ ಸಂದೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಗ್ಗೆ ತಿಳಿದ ಹಿನ್ನೆಲೆಯಲ್ಲಿ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಯುವತಿಯು ಕಿತ್ತು ಬಿಸಾಕಿದ್ದಾಳೆ.

*ಯುವತಿಯ ಪಾಲಕರಿಂದ ಹಲ್ಲೆ*
ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಕಾರಿನಲ್ಲಿ ಬರುತ್ತಿದ್ದ ಪ್ರೇಮಿಗಳನ್ನು ಮಾರ್ಗಮಧ್ಯೆ ಶಿಡ್ಲಘಟ್ಟ ನಗರದಲ್ಲಿ ಯುವತಿಯ ಪಾಲಕರು ಅಡ್ಡಗಟ್ಟಿದ್ದಾರೆ. ಇದೇ ವೇಳೆ ಕಾರಿನ ಗಾಜುಗಳನ್ನು ಹೊಡೆದು ಹಾಕಲಾಗಿದೆ. ಮಹಿಳಾ ಠಾಣೆಗೆ ಇಬ್ಬರನ್ನೂ ಕರೆದುಕೊಂಡು ಬಂದು, ಪ್ರಕರಣದ ಬಗ್ಗೆ ಚರ್ಚಿಸಲಾಗಿದೆ. ಇದೇ ವೇಳೆ ಸಂದೀಪುವಿನ ಒಂದೊಂದೇ ಪ್ರೇಮ ಪ್ರಕರಣಗಳು ಹೊರ ಬಂದಿವೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net