ತಲೆ ಮೇಲೆ ಕಲ್ಲು ಹಾಕಿ ಯುವಕನ ಕೊಲೆ, ರಕ್ತಸಿಕ್ತ ಮೃತದೇಹ ಪತ್ತೆ,

ಮೃತ ಇಸ್ಮಾಯಿಲ್‌ ಪಾಷಾ.
ಮೃತ ಇಸ್ಮಾಯಿಲ್‌ ಪಾಷಾ.
Published on

ಚಿಕ್ಕಬಳ್ಳಾಪುರ: ಇಲ್ಲಿನಶಾಂತಿನಗರದಲ್ಲಿ (ನಕ್ಕಲಕುಂಟೆ) ಯುವಕನನ್ನು ಕಲ್ಲಿನಿಂದ ಜಜ್ಜಿ ಕಿಡಿಗೇಡಿಗಳು ಕೊಲೆಮಾಡಿದ್ದಾರೆ. (young-man-murdered)

ನಗರದ ಗಂಗಮ್ಮನಗುಡಿಯ ನಿವಾಸಿಇಸ್ಮಾಯಿಲ್‌ ಪಾಷಾ (೨೮) ಮೃತನು. ಬಣ್ಣ ಬಳಿಯುವ ಪೈಂಟರ್‌ ಕೆಲಸ ಮಾಡುತ್ತಿದ್ದ. ತಡರಾತ್ರಿಮನೆಯಿಂದ ಹೊರಗೆ ಹೋದವನು ಮತ್ತೆ ವಾಪಸ್‌ ಬಂದಿಲ್ಲ. ಸ್ಥಳೀಯರು ರಸ್ತೆಯ ಮಧ್ಯೆ ಮೃತದೇಹಬಿದ್ದಿರುವುದನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೃತನ ಚಲನವಲನಗಳ ಬಗ್ಗೆ ಅವನ ಆಪ್ತವಲಯದಿಂದ ಮಾಹಿತಿ ಕಲೆ ಹಾಕುತ್ತಿದ್ದು ಆತ ಓಡಿದ ಎನ್ನಲಾದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಸ್ನೇಹಿತ ಜತೆ ಸೇರಿ ಅಂಗಡಿಯ ಮುಂಭಾಗ ಸಿಗರೇಟುಸೇದುತ್ತ ಮಾತನಾಡಿರುವ ವಿಡಿಯೋ ಸಿಕ್ಕಿದೆ. ಇನ್ನು ಬಾರಿನಲ್ಲಿ ಮದ್ಯ ಸೇವಿಸಿ ಹೊರ ಹೋಗಿರುವಬಗ್ಗೆಯೂ ಮಾಹಿತಿ ತಿಳಿದು ಬಂದಿದೆ. ನನ್ನ ಮಗ ಯಾರ ತಂಟೆಗೂಹೋಗುತ್ತಿರಲಿಲ್ಲ. ಯಾರೊಂದಿಗೂ ಗಲಾಟೆ ಮಾಡಿಕೊಂಡಿಲ್ಲ. ಇನ್ನು ಬಾರಿಗೆ ಹೋಗಿ ಮದ್ಯ ಸೇವಿಸುತ್ತಿದ್ದ.ಇದರ ನಡುವೆ ಯಾರೂ ಕರೆದುಕೊಂಡು ಹೋಗಿ, ಹೊಡೆದು ಬಳಿಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿಕೊಂದಿದ್ದಾರೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತನ ತಾಯಿ ಮುಮ್ತಾಜ್‌ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net