ಎನ್​ಡಿಎ ಅಭ್ಯರ್ಥಿ ಪರ ಒಗ್ಗಟ್ಟಿನಿಂದ ಕೆಲಸ ಮಾಡಿ | Work unitedly for the NDA candidate.

ವಿಧಾನ ಪರಿಷತ್​ ಆಗ್ನೇಯ ಪದವೀಧರ ಚುನಾವಣೆಯಲ್ಲಿ ಜೆಡಿಎಸ್​ ಮತ್ತು ಬಿಜೆಪಿಯ ಎನ್​ಡಿಎ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್​ ಪರವಾಗಿ 2 ಪಕ್ಷಗಳ ಮುಖಂಡರು, ಕಾರ್ಯಕರ್ತರು ಕೆಲಸ ಮಾಡಿ ಅವರನ್ನು ಗೆಲ್ಲಿಸಬೇಕು ಎಂದು ಮೈತ್ರಿ ಪಕ್ಷಗಳ ಮುಖಂಡರಿಗೆ ಶಾಸಕ ಬಿ.ಎನ್​.ರವಿಕುಮಾರ್​ ತಿಳಿಸಿದರು.
Work unitedly for the NDA candidate.
ಶಿಡ್ಲಘಟ್ಟ ತಾಲೂಕು ಹಂಡಿಹನಾಳಯಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ೇತ್ರದ ಅಭ್ಯರ್ಥಿ ಪರ ಮತಯಾಚನೆ, ಮೈತ್ರಿ ಪಕ್ಷದ ಸಮನ್ವಯ ಸಮಿತಿ ಸಭೆಯನ್ನು ಶಾಸಕ ಬಿ.ಎನ್​.ರವಿಕುಮಾರ್​ ಉದ್ಘಾಟಿಸಿದರು.Work unitedly for the NDA candidate.
Published on: 
  • ಶಾಸಕ ಬಿ.ಎನ್​.ರವಿಕುಮಾರ್​ ಕರೆ

  • ತಾಲೂಕು ಸಮನ್ವಯ ಸಮಿತಿ ಸಭೆ

ಶಿಡ್ಲಘಟ್ಟ:ವಿಧಾನ ಪರಿಷತ್​ ಆಗ್ನೇಯ ಪದವೀಧರ ೇತ್ರದ ಚುನಾವಣೆಯಲ್ಲಿ ಜೆಡಿಎಸ್​ ಮತ್ತು ಬಿಜೆಪಿಯ ಎನ್​ಡಿಎ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್​ ಪರವಾಗಿ 2 ಪಕ್ಷಗಳ ಮುಖಂಡರು, ಕಾರ್ಯಕರ್ತರು ಕೆಲಸ ಮಾಡಿ ಅವರನ್ನು ಗೆಲ್ಲಿಸಬೇಕು ಎಂದು ಮೈತ್ರಿ ಪಕ್ಷಗಳ ಮುಖಂಡರಿಗೆ ಶಾಸಕ ಬಿ.ಎನ್​.ರವಿಕುಮಾರ್​ ತಿಳಿಸಿದರು.

ತಾಲೂಕಿನ ಹಂಡಿಗನಾಳದ ಬಾಲಾಜಿ ಕನ್ವೆನ್ಷನ್​ ಹಾಲ್​ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಪಕ್ಷಗಳ ತಾಲೂಕು ಸಮನ್ವಯ ಸಮಿತಿ ಸಭೆ ಹಾಗೂ ಅಭ್ಯರ್ಥಿಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಚುನಾವಣೆಗೆ ಕಡಿಮೆ ಸಮಯ ಇರುವುದರಿಂದ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿನ ಪದವೀಧರ ಮತದಾರರನ್ನು ಸಂಪರ್ಕಿಸಿ, ಅಭ್ಯರ್ಥಿ ಪರವಾಗಿ ಮತಯಾಚಿಸಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್​ ರಾಮಚಂದ್ರಗೌಡ ಮಾತನಾಡಿ, ಬಿ.ವೈ.ವಿಜಯೇಂದ್ರ ಮತ್ತು ಎಚ್​.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣಾ ಸಿದ್ಧತೆ ಕುರಿತು ಸಭೆ ನಡೆದಿದ್ದು, ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಆಗ್ನೇಯ ಪದವೀಧರ ಕ್ಷೇತ್ರವನ್ನು ಮೂರು ಭಾರಿ ಪ್ರತಿನಿಸಿ ಒಮ್ಮೆ ಗೆದ್ದಿರುವ ತೂಪಲ್ಲಿ ಚೌಡರೆಡ್ಡಿ ಅವರು ಆಗ್ನೇಯ ಪದವೀಧರ ಕ್ಷೇತ್ರದ ಮತದಾರರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದು, ಈ ಭಾರಿ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್​ ಅವರನ್ನು ಗೆಲ್ಲಿಸುವಲ್ಲಿ ಚೌಡರೆಡ್ಡಿ ಪಾತ್ರ ಮುಖ್ಯ. ಒಂದೊಮ್ಮೆ ಕೆ.ಎಂ.ಸುರೇಶ್​ ಸೋತರೆ ಅದಕ್ಕೆ ತೂಪಲ್ಲಿ ಚೌಡರೆಡ್ಡಿ ಅವರೆ ನೇರಹೊಣೆ ಎಂದು ಶಾಸಕ ಬಿ.ಎನ್​.ರವಿಕುಮಾರ್​ ಹೇಳಿದರು.

ಚೌಡರೆಡ್ಡಿ ಕ್ಷೇತ್ರದ ಸುತ್ತಾಡಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು, ಇಲ್ಲವಾದಲ್ಲಿ ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು, ಈ ಚುನಾವಣೆಯು ಮುಂದಿನ ಎಲ್ಲ ಚುನಾವಣೆಗಳಿಗೂ ದಿಕ್ಸೂಚಿಯಾಗಲಿದ್ದು, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಉತ್ತಮ ಸಂದೇಶವನ್ನು ನೀಡಬೇಕು ಎಂದು ಮನವಿ ಮಾಡಿದರು.

ನಿರೀಕ್ಷೆಯಂತೆ ಜನರಿರಲಿಲ್ಲ
ಮೈತ್ರಿ ಅಭ್ಯರ್ಥಿಯ ಪರವಾಗಿ ನಡೆದ ಸಮನ್ವಯ ಸಮಿತಿ ಸಭೆ ಹಾಗೂ ಪ್ರಚಾರ ಸಭೆಯಲ್ಲಿ ನಿರೀೆಯಂತೆ ಜೆಡಿಎಸ್​, ಬಿಜೆಪಿ ಮುಖಂಡರು, ಕಾರ್ಯಕರ್ತರು ಇರಲಿಲ್ಲ. ಸಭಾಂಗಣದಲ್ಲಿ ಹಾಕಿದ್ದ ಖುರ್ಚಿಗಳಲ್ಲಿ ಕಾರ್ಯಕ್ರಮ ಮುಗಿಯುವವರೆಗೂ ಒಂದಷ್ಟು ಖುರ್ಚಿಗಳು ಖಾಲಿಯಾಗಿದ್ದವು.

ಸಂಸದ ಮಲ್ಲೇಶ್​ ಬಾಬು, ಮಾಜಿ ಸಂಸದ ಎನ್​.ಮುನಿಸ್ವಾಮಿ, ಜೆಡಿಎಸ್​ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಎಂಎಲ್​ಸಿ ಚೌಡರೆಡ್ಡಿ, ಚಿಮುಲ್​ ನಿರ್ದೇಶಕ ಬಂಕ್​ ಮುನಿಯಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಸೀಕಲ್​ ಆನಂದಗೌಡ, ಪೂಲಕುಂಟಹಳ್ಳಿ ರುನಾಥ ರೆಡ್ಡಿ, ಡಾ.ಧನಂಜಯರೆಡ್ಡಿ, ಅಪ್ಪೇಗೌಡನಹಳ್ಳಿ ಲ್ಮನಾರಾಯಣರೆಡ್ಡಿ, ಬಿ.ಸಿ.ನಂದೀಶ್​, ಡಿಎಸ್​ಎನ್​.ರಾಜು, ತಾದೂರು ರು ಮೈತ್ರಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net